ಹೊಸಪೇಟೆ : ಬಳ್ಳಾರಿಯ ಹೊಸಪೇಟೆಯಲ್ಲಿ ಕಿಡಿಗೇಡಿಗಳಿಂದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ ಮೇಲೆ ಚಪ್ಪಲಿ ಎಸೆದ ಘಟನೆ ನಿನ್ನೆ ನಡೆದಿದೆ.
ನಟ ದರ್ಶನ್ ತೂಗದೀಪ ಅಭಿಯನದ ಕ್ರಾಂತಿ ಸಿನೆಮಾದ ಪ್ರಚಾರದ ವೇಳೆ ’ಹಾಗು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸಾವಿರಾರು ಜನರು ಆಗಮಿಸಿದ್ದರು,ಈ ವೇಳೆ ಕಿಡಿಗೇಡಿಗಳು ದರ್ಶನ ಮೇಲೆ ಚಪ್ಪಲಿ ಎಸೆದಿದ್ದಾರೆ.
ಕಿಡಿಗೇಡಿಗಳ ಈ ಅಟ್ಟಹಾಸದಿಂದ ಕ್ರಾಂತಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆದಿದ್ದು ಭಾನುವಾರ ರಾತ್ರಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ
ಕಿಡಿಗೇಡಿಗಳು ದರ್ಶನ್ ಬ್ಯಾನರ್ ಹರಿದು ಹಾಕಿದ್ದು ಈ ಘಟನೆ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.