ಬೆಂಗಳೂರು : ನಟ ಸುದೀಪ್‌ಗಾಗಿಯೇ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಐಷಾರಾಮಿ ಕ್ಯಾರವನ್ ಸಿದ್ಧವಾಗಿ ಬಂದಿದೆ. ಸದ್ಯ ಕನ್ನಡ ಚಿತ್ರರಂಗದಲ್ಲೇ
ಅತ್ಯಂತ ದುಬಾರಿ ಬೆಲೆಯ ಕ್ಯಾರವನ್ ಇದಾಗಿದ್ದು, ಇದರ ಬೆಲೆ ಸುಮಾರು 6.6 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಖ್ಯಾತ ಡಿಸೈನರ್ ದಿಲೀಪ್ ಛಾಬ್ರಿಯಾ ಕ್ರಿಯೇಟ್ ಮಾಡಿರುವ `ಡಿಸಿ೨’ ಸಂಸ್ಥೆಯ ಜಿಮ್ ಮಾಡ್ಯುಲರ್ ಕ್ಯಾರವನ್ ಇದಾಗಿದ್ದು, ಸುದೀಪ್ ಅವರ ಇಷ್ಟಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲಾಗಿದೆ. ಮಹಾರಾಷ್ಟçದ ಪುಣೆಯಲ್ಲಿ ಈ ಕ್ಯಾರವಾನ್ ರೆಡಿ ಆಗಿದೆ.
ಈ ಐಷಾರಾಮಿ ಕ್ಯಾರವನ್‌ನ ಮತ್ತೊಂದು ವಿಶೇಷವೆಂದರೆ, ಇದರ ಮೇಲೆ ಸುದೀಪ್ ಅವರ ಹೆಸರನ್ನು ಸೂಚಿಸುವ `ಏ’ (ಕಿಚ್ಚ) ಎಂಬ ಸಿಂಬಲ್ ಅನ್ನು
ವಿನ್ಯಾಸಗೊಳಿಸಲಾಗಿದೆ. ನಟ ಸುದೀಪ್ ಅವರು ತಮ್ಮ ಕಾರಿನ ಮೇಲೂ ಇದೇ ರೀತಿಯ ಸಿಂಬಲ್ ಹೊಂದಿದ್ದು, ಈಗ ಅದೇ ಲೋಗೋವನ್ನು ತಮ್ಮ ಹೊಸ
ಕ್ಯಾರವನ್ ಮೇಲೂ ಹಾಕಿಸಿಕೊಂಡಿದ್ದಾರೆ.
ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಸಿನಿಮಾದ ಶೂಟಿಂಗ್ ಜೂ. 26ರಿಂದ ಶುರುವಾಗಿದೆ. ಕನಕಪುರದ ಬಳಿ ಬೃಹತ್ ಸೆಟ್ ನಿರ್ಮಿಸಲಾಗಿದ್ದು,
ಅಲ್ಲಿ ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ. ಶೂಟಿಂಗ್ ಸೆಟ್‌ನಲ್ಲಿ ನಿಂತಿರುವ ಈ ಐಷಾರಾಮಿ ವಾಹನದ ಲುಕ್ ಎಲ್ಲೆಡೆ ಸದ್ದು ಮಾಡುತ್ತಿದೆ.


