Monday, June 29, 2026
HomeUncategorizedಬೆಂಗಳೂರು : ಆರ್‌ಎಸ್‌ಎಸ್ ವಿರುದ್ಧ ಪೋಸ್ಟ್ ಪ್ರಕರಣ : ಪ್ರಿಯಾಂಕ್ ಖರ್ಗೆ, ಹ್ಯಾರಿಸ್ ನಲಪಾಡ್‌ಗೆ ನ್ಯಾಯಾಲಯ...

ಬೆಂಗಳೂರು : ಆರ್‌ಎಸ್‌ಎಸ್ ವಿರುದ್ಧ ಪೋಸ್ಟ್ ಪ್ರಕರಣ : ಪ್ರಿಯಾಂಕ್ ಖರ್ಗೆ, ಹ್ಯಾರಿಸ್ ನಲಪಾಡ್‌ಗೆ ನ್ಯಾಯಾಲಯ ಸಮನ್ಸ್.

ಬೆಂಗಳೂರು : ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಗೂ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಜುಲೈ 21ರಂದು ಇಬ್ಬರೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ, 2025ರ ಅಕ್ಟೋಬರ್ 14ರಂದು ಆರ್‌ಎಸ್‌ಎಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪದಡಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಎ. ತೇಜಸ್ ಅವರು ಖಾಸಗಿ ದೂರು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 356ರಡಿ ಮೊದಲ ಹಾಗೂ ಮೂರನೇ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದು, ಎರಡನೇ ಆರೋಪಿ ದಿನೇಶ್ ಗುಂಡೂರಾವ್ ಅವರ ಹೆಸರನ್ನು ಪ್ರಕರಣದಿಂದ ಕೈಬಿಟ್ಟಿದೆ.

ಇದೇ ಪ್ರಕರಣದಲ್ಲಿ, ಯೂಟ್ಯೂಬ್ ವಾಹಿನಿಯೊಂದರಲ್ಲಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೀಡಿದ ಹೇಳಿಕೆ ಆರ್‌ಎಸ್‌ಎಸ್ ಸಂಘಟನೆಯ ಘನತೆಗೆ ಧಕ್ಕೆ ಉಂಟುಮಾಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular