ಹೊಸದಿಲ್ಲಿ : ತಮಿಳುನಾಡಿನ ಮಹಿಳೆಯೊಬ್ಬರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ ದಲಿತ ಮೀಸಲಾತಿಯ ಲಾಭ ಪಡೆಯಲು ತನ್ನನ್ನು ತಾನು ಹಿಂದೂ ಧರ್ಮೀಯಳು ಎಂದು ಪ್ರತಿಪಾದಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ ಕಾರಿದೆ.
ಮೀಸಲಾತಿ ಸೌಲಭ್ಯ ಪಡೆಯಲು ಮತಾಂತರ ಮಾಡುವುದು ಅಥವಾ ಮರು ಮತಾಂತರ ಮಾಡುವುದು ಸಂವಿಧಾನಕ್ಕೆ ಮಾಡಿದ ವಂಚನೆಯಾಗಿದೆ. ಇದು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಮೀಸಲಾತಿಯ ಆಶಯಕ್ಕೆ ಧಕ್ಕೆ ತರಲಿದೆ. ಇದನ್ನು ಅನುಮತಿಸಲಾಗುವುದಿಲ್ಲ ಎಂದು ಪಂಕಜ್ ಮಿತ್ತಲ್, ಆರ್ ಮಹದೇವನ್ ಅವರ ಪೀಠ ಸ್ಪಷ್ಟವಾಗಿ ಹೇಳಿದೆ.
ಸೆಲ್ವಮಣಿ ಅವರು ಹಿಂದೂ ಧರ್ಮದ ವಲ್ಲುವನ್ ಜಾತಿಗೆ ಸೇರಿದವರು ಎಂದು ಹೇಳಿ ಎಸ್ಸಿ ಮೀಸಲಾತಿಯಡಿ ಗುಮಾಸ್ತ ಹುದ್ದೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ತಮಿಳುನಾಡು ಸರ್ಕಾರ ಮತ್ತು ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು