Saturday, July 11, 2026
Homeರಾಜ್ಯಮೈಸೂರು : ಗಾನಕೋಗಿಲೆ ಎಸ್. ಜಾನಕಿ ಇನ್ನಿಲ್ಲ; ಸಂಗೀತ ಲೋಕದ ದಿಗ್ಗಜ ಧ್ವನಿ ಮೌನ.

ಮೈಸೂರು : ಗಾನಕೋಗಿಲೆ ಎಸ್. ಜಾನಕಿ ಇನ್ನಿಲ್ಲ; ಸಂಗೀತ ಲೋಕದ ದಿಗ್ಗಜ ಧ್ವನಿ ಮೌನ.

ಮೈಸೂರು : ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ಇಂದು (ಜುಲೈ 11) ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

ಈ ವರ್ಷದ ಜನವರಿಯಲ್ಲಿ ಪುತ್ರ ಮುರಳಿ ಕೃಷ್ಣ ಅವರ ನಿಧನದಿಂದ ತೀವ್ರ ಪುತ್ರಶೋಕದಲ್ಲಿದ್ದ ಜಾನಕಿ ಅವರ ಆರೋಗ್ಯ ಕಳೆದ ಕೆಲವು ತಿಂಗಳುಗಳಿಂದ ಹದಗೆಟ್ಟಿತ್ತು. ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮೂಲದವರಾದರೂ, ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಅಮರಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು. ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ ಭಾರತೀಯ ಸಂಗೀತ ಕ್ಷೇತ್ರದ ಅಪರೂಪದ ಗಾನರತ್ನರಾಗಿದ್ದರು.

70–80ರ ದಶಕದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಹಾಡಿದ ಅನೇಕ ಯುಗಳಗೀತೆಗಳು ಇಂದಿಗೂ ಜನಮನದಲ್ಲಿ ಜೀವಂತವಾಗಿವೆ. “ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ” ಸೇರಿದಂತೆ ನೂರಾರು ಸದಾಬಹಾರ ಗೀತೆಗಳು ಅವರ ಅಮೋಘ ಗಾಯನಕ್ಕೆ ಸಾಕ್ಷಿಯಾಗಿವೆ.

ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದ ಎಸ್. ಜಾನಕಿ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular