ಕಲಬುರಗಿ : ಜಮೀನು ವ್ಯಾಜ್ಯದಿಂದಾಗಿ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದು ಒಂದಿಡೀ ಕುಟುಂಬದ ಸದಸ್ಯರ ಸಾಮೂಹಿಕ ಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.
ಶಿವಲಿಂಗಪ್ಪ ಕರಿಕಲ್ ಹೀಗೆ ಹತ್ಯೆಗೆ ಯತ್ನಿಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಗ್ರಾಮದ ಗುಂಡೆರಾವ್ ಕರಿಕಲ್ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಹತ್ಯೆಗೆ ಯತ್ನಿಸಿದ ಶಿವಲಿಂಗಪ್ಪ, ಬಟ್ಟೆಯ ಉಂಡೆಗಳನ್ನು ಪೆಟ್ರೋಲ್ ನಲ್ಲಿ ತೊಯಿಸಿ ಮನೆಯಲ್ಲಿ ಎಸೆದಿದ್ದಾನೆ. ಆ ಬಳಿಕ ಕೀಟನಾಶಕದ ಸ್ಪ್ರೇಯರ್ ಟಿನ್ ನಲ್ಲಿ ತುಂಬಿದ್ದ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಇಟ್ಟಿದ್ದಾನೆ. ಈ ವೇಳೆ ಮನೆಯಲ್ಲಿ ಆರೇಳು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ೯ಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದಂತೆ ಕರೀಕಲ್ ಕುಟುಂಬದ ಸದಸ್ಯರು ಬಾಗಿಲು ಬಂದ್ ಮಾಡಿಕೊಂಡಿದ್ದರಿAದ ಸAಭವಿಸಬಹುದಾದ ಸಾವು-ನೋವು ತಪ್ಪಿದಂತಾಗಿದೆ. ಬೆಂಕಿಯ ಕೆನ್ನಾಲಿಗೆಯಿAದಾಗಿ ಭಾಗಶಃ ಮನೆ ಸುಟ್ಟು ಕರಕಲಾಗಿದೆ. ಕೃತ್ಯ ಎಸಗಿರುವ ಶಿವಲಿಂಗಪ್ಪ ತನ್ನ ನಾಲ್ಕು ಎಕರೆ ಜಮೀನು ಗುಂಡೆರಾವ್ ಗೆ ಮಾರಾಟ ಮಾಡಿದ್ದ. ಈ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಜಮೀನು ಖರೀದಿ ಮಾತಾಗಿ ಶಿವಲಿಂಗಪ್ಪ ರೂ.13 ಲಕ್ಷ ಅಡ್ವಾನ್ಸ್ ಪಡೆದಿದ್ದ. ಬಳಿಕ ಜಮೀನು ರಿಜಿಸ್ಟರ್ ಮಾಡಿಕೊಡುವ ವಿಚಾರದಲ್ಲಿ ತಗಾದೆ ತೆಗೆದಿದ್ದ ಎನ್ನಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಜಮೀನು ರಿಜಿಸ್ಟರ್ ಮಾಡಿಕೊಡಲು ಶಿವಲಿಂಗಪ್ಪ ವಿರೋಧ ಮಾಡುತ್ತಿದ್ದ ಕಾರಣ ಶಿವಲಿಂಗಪ್ಪ ಮತ್ತು ಕರೀಕಲ್ ಕುಟುಂಬದ ಮಧ್ಯೆ ವೈಮನಸ್ಸು ಏರ್ಪಟ್ಟಿತ್ತು ಎಂದು ಹೇಳಲಾಗಿದೆ.ಇನ್ನು, ಕರೀಕಲ್ ಮನೆಗೆ ಬೆಂಕಿ ತಗುಲಿದ್ದನ್ನು ಕಂಡ ಗ್ರಾಮಸ್ಥರು ಮನೆಯ ಬಾಗಿಲು ಮುರಿದು ಕುಟುಂಬಸ್ಥರ ರಕ್ಷಣೆ ಮಾಡಿದ್ದಾರೆ. ಭಾರಿ ಪ್ರಮಾಣದ ಬೆಂಕಿ ಮತ್ತು ಹೊಗೆಯ ಕಾರಣಕ್ಕಾಗಿ ಗುಂಡೇರಾವ್ ಕುಟುಂಬಸ್ಥರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಎಲ್ಲರನ್ನೂ ದಾಖಲು ಮಾಡಲಾಗಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.