Saturday, July 18, 2026
Homeರಾಜ್ಯಬೆಂಗಳೂರು: ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ – ಮೂವರು ಮಕ್ಕಳು ಸೇರಿ 7...

ಬೆಂಗಳೂರು: ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ – ಮೂವರು ಮಕ್ಕಳು ಸೇರಿ 7 ಮಂದಿ ಮೃತ್ಯು.

ಬೆಂಗಳೂರು : ರಾಜಧಾನಿಯಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿರುವ ನಡುವೆಯೇ, ಶಿವಾಜಿನಗರದಲ್ಲಿರುವ Bowring and Lady Curzon Hospital ಆವರಣದ ಕಾಂಪೌಂಡ್ ಗೋಡೆ ಇಂದು ಸಂಜೆ ದಿಢೀರ್ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ಘಟನೆಯ ವಿವರ:
ಆಸ್ಪತ್ರೆಯ ತುರ್ತು ಅಪಘಾತ ವಿಭಾಗದ (ಎಮರ್ಜೆನ್ಸಿ ವಾರ್ಡ್) ಗೇಟ್ ಸಮೀಪದ ಕಾಂಪೌಂಡ್ ಗೋಡೆ ಮಳೆಯ ತೀವ್ರತೆಗೆ ತಾಳಲಾರದೆ ಕುಸಿದು ಬಿದ್ದಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಗೋಡೆಯ ಬಳಿಯಲ್ಲಿ ಆಶ್ರಯ ಪಡೆದಿದ್ದವರು ಅವಘಡಕ್ಕೆ ಸಿಲುಕಿರುವುದು ಪ್ರಾಥಮಿಕ ಮಾಹಿತಿ.

ಅವಶೇಷಗಳಡಿ ಸಿಲುಕಿದವರು:
ಗೋಡೆ ಕುಸಿದಾಗ ಮೂವರು ಮಕ್ಕಳು ಹಾಗೂ ನಾಲ್ವರು ವಯಸ್ಕರು ಅವಶೇಷಗಳಡಿ ಸಿಲುಕಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು.

ರಕ್ಷಣಾ ಕಾರ್ಯಾಚರಣೆ:
ಘಟನೆ ತಿಳಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ನಿರಂತರ ಮಳೆಯ ನಡುವೆಯೇ ಜೆಸಿಬಿ ಯಂತ್ರಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿದವರನ್ನು ಹೊರತೆಗೆದರು. ಆದರೆ, ಕಾರ್ಯಾಚರಣೆ ಪೂರ್ಣಗೊಳ್ಳುವಷ್ಟರಲ್ಲಿ ಮೂವರು ಮಕ್ಕಳು ಸೇರಿ ಏಳು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ

RELATED ARTICLES

LEAVE A REPLY

Please enter your comment!
Please enter your name here

Most Popular