ಮಂಗಳೂರು : ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ವಾಲಿಬಾಲ್ ಆಟಗಾರ ಆಟಗಾರನ ಕಾಮಕಾಂಡ ಬಯಲಾಗಿದ್ದು ಮೊಬೈಲ್ನಲ್ಲಿ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋ ಪತ್ತೆಯಾಗಿದೆ.
ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ಹಿನ್ನಲೆ ಅನ್ಯಕೋಮಿನ ಯುವಕನಿಗೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಹಲ್ಲೆ ಮಾಡಲಾಗಿತ್ತು ಈ ವೇಳೆ ಆತನ ಮೊಬೈಲ್ ಪರೀಕ್ಷಿಸಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳು ಪತ್ತೆ ಆಗಿದ್ದು ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ಕಂ, ವಾಲಿಬಾಲ್ ಆಟಗಾರ ಸೈಯದ್ ಎಂಬಾತ ಎಂದು ತಿಳಿದಿದ್ದು ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದನು.ಈ ಹಿನ್ನಲೆ ಹಿಂದೂ ಸಂಘಟನೆ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಬೆಳ್ತಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿದ್ದಾರೆ.


