Monday, May 4, 2026
Flats for sale
Homeದೇಶನವದೆಹಲಿ : ವಾಣಿಜ್ಯ ಎಲ್‌ಪಿಜಿ ಬೆಲೆ ಭಾರೀ ಏರಿಕೆ – ಸಿಲಿಂಡರ್ ₹3,000 ದಾಟಿದ ದರ.ಕಂಗಾಲಾದ...

ನವದೆಹಲಿ : ವಾಣಿಜ್ಯ ಎಲ್‌ಪಿಜಿ ಬೆಲೆ ಭಾರೀ ಏರಿಕೆ – ಸಿಲಿಂಡರ್ ₹3,000 ದಾಟಿದ ದರ.ಕಂಗಾಲಾದ ಹೋಟೆಲ್ ಮಾಲೀಕರು.

ನವದೆಹಲಿ : ಪಂಚರಾಜ್ಯ ಚುನಾವಣೆಗಳ ನಂತರ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಏಕಾಏಕಿ ₹993 ಹೆಚ್ಚಳ ಮಾಡಿದ್ದು, ಹೋಟೆಲ್ ಮತ್ತು ಕೈಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ.

ಹೊಸ ದರ ಅನ್ವಯ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹2,079ರಿಂದ ಸುಮಾರು ₹3,071–₹3,072ಕ್ಕೆ ಏರಿಕೆಯಾಗಿದೆ. ಜೊತೆಗೆ 5 ಕೆಜಿ ಸಣ್ಣ ಸಿಲಿಂಡರ್ ದರವನ್ನೂ ₹261 ಹೆಚ್ಚಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಇಂಧನ ದರ ಏರಿಕೆಗೆ ಮಧ್ಯಪ್ರಾಚ್ಯ ಸಂಘರ್ಷ ಕಾರಣವಾಗಿದ್ದು, ಕಳೆದ 3 ತಿಂಗಳಲ್ಲಿ ಇದು ಅತಿ ಹೆಚ್ಚು ಏರಿಕೆಯಾಗಿದೆ. ಆಹಾರ ಮಳಿಗೆಗಳು, ಹೋಟೆಲ್‌ಗಳು ಹಾಗೂ ಕೈಗಾರಿಕಾ ವಲಯದಲ್ಲಿ ಬಳಸುವ ಈ ಸಿಲಿಂಡರ್ ಬೆಲೆ ಏರಿಕೆಯ ಪರಿಣಾಮವಾಗಿ ತಿಂಡಿ, ಊಟ, ಚಹಾ, ಕಾಫಿ ದರಗಳು ಹೆಚ್ಚಾಗುವ ಸಾಧ್ಯತೆ ಇದೆ.

ಹೋಟೆಲ್ ಉದ್ಯಮಕ್ಕೆ ಹೊರೆ: ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೋಟೆಲ್ ಮಾಲೀಕರು ದರ ಏರಿಕೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ 60 ದಿನಗಳಲ್ಲಿ ವಾಣಿಜ್ಯ ಎಲ್‌ಪಿಜಿ ದರವು ಸುಮಾರು ₹1,300ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಹೋಟೆಲ್ ಮಾಲೀಕರ ಸಂಘದ ಪ್ರಕಾರ : ಹೆಚ್ಚಿದ ವೆಚ್ಚವನ್ನು ಭರಿಸುವುದು ಕಷ್ಟ ಅನಿವಾರ್ಯವಾಗಿ ಆಹಾರ ದರ ಹೆಚ್ಚಿಸುವ ಪರಿಸ್ಥಿತಿ ಉಂಟಾಗಿದೆ.

ಜಿಎಸ್‌ಟಿ ಕುರಿತ ಅಸಮಾಧಾನ : ವಾಣಿಜ್ಯ ಎಲ್‌ಪಿಜಿ ಮೇಲೆ ಶೇ.18ರ ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಇದನ್ನು ಶೇ.5ಕ್ಕೆ ಇಳಿಸಬೇಕು ಎಂಬ ಬೇಡಿಕೆ ದರ ಏರಿಕೆ + ಹೆಚ್ಚಿನ ಜಿಎಸ್‌ಟಿ ಎರಡೂ ಸೇರಿ ಒತ್ತಡ.

ಗೃಹಬಳಕೆ ಸಿಲಿಂಡರ್ : ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.ಒಟ್ಟಿನಲ್ಲಿ, ವಾಣಿಜ್ಯ ಎಲ್‌ಪಿಜಿ ದರ ಏರಿಕೆ ಪರಿಣಾಮವಾಗಿ ಸಾಮಾನ್ಯ ಗ್ರಾಹಕರಿಗೂ ಆಹಾರ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular