Saturday, July 18, 2026
Homeಜಿಲ್ಲೆಮಂಗಳೂರು : ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಗೊಂದಲಕ್ಕೆ ತೆರೆ – ನ್ಯಾಯಾಲಯ ಆದೇಶದಂತೆ ಹೊಸ...

ಮಂಗಳೂರು : ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಗೊಂದಲಕ್ಕೆ ತೆರೆ – ನ್ಯಾಯಾಲಯ ಆದೇಶದಂತೆ ಹೊಸ ಸಮಿತಿ ರಚನೆ.

ಮಂಗಳೂರು : ಸುಪ್ರಸಿದ್ದ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಆಡಳಿತದಲ್ಲಿ ಉಂಟಾಗಿದ್ದ ಗೊಂದಲಕ್ಕೆ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಅಂತಿಮ ಪರಿಹಾರ ದೊರೆತಿದೆ.

ಅಧ್ಯಕ್ಷರ ಅನುಮತಿ ಪಡೆಯದೆ ಕೆಲ ಆಡಳಿತ ಸಮಿತಿ ಸದಸ್ಯರು ಸಭೆ ನಡೆಸಿ, ನಿಯಮಾನುಸಾರವಲ್ಲದ ರೀತಿಯಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾಗಿ ಆರೋಪ ಎದುರಾಗಿತ್ತು. ಒಟ್ಟು 8 ಸದಸ್ಯರ ಸಮಿತಿಯಲ್ಲಿ 5 ಮಂದಿ ಗೈರಾಗಿದ್ದ ವೇಳೆ ನಡೆದ ಈ ಸಭೆ ಅಸಂವಿಧಾನಿಕ ಎಂದು ಹಿಂದಿನ ಪದಾಧಿಕಾರಿಗಳ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಲಯ, ಹಿಂದಿನ ಸಮಿತಿಯ ಪರವಾಗಿ ಆದೇಶ ನೀಡಿದೆ.

ಅದರಂತೆ 16-02-2026 ರಂದು ಕ್ಷೇತ್ರದ ಸಮೀಪದ ನಾರಾಯಣ ಗುರು ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ವಾರ್ಷಿಕ ಪ್ರತಿನಿಧಿ ಸಭೆ ನಡೆಸಲಾಯಿತು. ಈ ಸಭೆಯ ನಿರ್ಣಯದಂತೆ 50 ಸದಸ್ಯರ ಹೊಸ ಸಮಿತಿಯನ್ನು ರಚಿಸಿ, 2026-27ನೇ ಸಾಲಿಗೆ 9 ಮಂದಿ ಪದಾಧಿಕಾರಿಗಳನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹೊಸ ಪದಾಧಿಕಾರಿಗಳ ವಿವರ:

ಅಧ್ಯಕ್ಷರು: ಎಚ್. ಎಸ್. ಸಾಯಿರಾಮ್

ಉಪಾಧ್ಯಕ್ಷರು: ಊರ್ಮಿಳಾ ರಮೇಶ್ ಕುಮಾರ್

ಕಾರ್ಯದರ್ಶಿ: ರವಿಶಂಕರ್ ಮಿಜಾರ್

ಖಜಾಂಜಿ: ಶೇಖರ್ ಪೂಜಾರಿ

ಸದಸ್ಯರು: ಜಗದೀಪ್ ಸುವರ್ಣ,

ಕೆ.ಟಿ. ಸುವರ್ಣ, ಎಚ್. ರತೀಂದ್ರನಾಥ್, ಸದಾನಂದ ಪೂಜಾರಿ, ಶರತ್ ಸುವರ್ಣ ರವರನ್ನು ನ್ಯಾಯಾಲಯದ ಆದೇಶದಂತೆ ರಚನೆಯಾದ ಈ ಸಮಿತಿ ಮುಂದಿನ ಆಡಳಿತವನ್ನು ನಡೆಸಲಿದೆ ಎಂದು ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular