Sunday, July 26, 2026
Homeರಾಜ್ಯಶಿರಾ : ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ - ಇಬ್ಬರು ಸಾವು!

ಶಿರಾ : ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ – ಇಬ್ಬರು ಸಾವು!

ಶಿರಾ : ಟ್ರ್ಯಾಕ್ಟ​ರ್​ಗೆ ಟವೆರಾ ಕಾರು ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ-ಮಧುಗಿರಿ ರಸ್ತೆಯ ಪದ್ಮಪುರ ಗೇಟ್ ಬಳಿ ಕಳೆದ ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ನೆಡೆದಿದೆ.

ಟವೇರಾ ಕಾರಿನಲ್ಲಿದ್ದ ರೇಖಾ ಸ್ಥಳದಲ್ಲಿ ಸಾವು ಚಾಲಕ ಮನು ಎಂಬುವವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರಿನಲ್ಲಿದ್ದ ಕಮಲಮ್ಮ, ಸಾಗರ ಮತ್ತು ಸರಸ್ವತಮ್ಮ ಸೇರಿ ನಾಲ್ವರಿಗೆ ಗಾಯವಾಗಿದ್ದು, ಶಿರಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಸಿಮೆಂಟ್ ಇಟ್ಟಿಗೆ ತುಂಬಿ‌ ರಸ್ತೆ ಬದಿ ಟ್ರ್ಯಾಕ್ಟ​ರ್​ಗೆ ಕಾರು ಡಿಕ್ಕಿಯಾಗಿದೆ.

ಮೃತರು, ಗಾಯಾಳುಗಳು ಶಿರಾ ತಾಲ್ಲೂಕಿನ ಯಲಿಯೂರು, ಹೆಗ್ಗನಹಳ್ಳಿ ಮೂಲದವರಾಗಿದ್ದು, ಕುನಳ್ಳಿಯ ಶನಿಮಹಾತ್ಮ ದೇವಾಲಯದಲ್ಲಿ ಪೂಜೆ‌ಮುಗಿಸಿ ವಾಪಸ್ಸಾಗ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರೇಖಾ ಪತಿ ಭಾನುಪ್ರಕಾಶ್ ಶಬರಿಮಲೆಗೆ ತೆರಳಿದ ಬಳಿಕ ಶನಿಮಹಾತ್ಮ ದೇವಾಲಯಕ್ಕೆ ತೆರಳಿದ್ದರು ಕಳೆದ ಐದು ತಿಂಗಳ ಹಿಂದೆ ಮದುವೆಯಾದರು ಎಂಬ ಮಾಹಿತಿ.ಈ ಕುರಿತು ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular