ಮೈಸೂರು : ಸಿಬ್ಬಂದಿ ಕೊರತೆಯಿಂದಾಗಿ ಠಾಣೆಗೆ ಬೀಗ ಹಾಕಿದ ಘಟನೆ ಸಚಿವ ಎಚ್ ಸಿ ಮಹದೇವಪ್ಪ ಪ್ರತಿನಿಧಿಸಿರುವ ಟಿ ನರಸೀಪುರ ಕ್ಷೇತ್ರದ ಮೂಗೂರಿನ ಠಾಣೆಯಲ್ಲಿ ನಡೆದಿದೆ.



ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪೊಲೀಸ್ ಉಪ ಠಾಣೆ ತೆರೆದಿದ್ದು ಸಿಬ್ಬಂದಿ ಕೊರತೆಯಿಂದ ಪೊಲೀಸ್ ಉಪ ಠಾಣೆಗೆ ಬೀಗ ಹಾಕಲಾಗಿದೆ. ಶ್ರೀ ಮಲೆ ಮಾದೇಶ್ವರ ಬೆಟ್ಟ, ಕೊಳ್ಳೇಗಾಲಕ್ಕೆ ತೆರಳುವ ಹೆದ್ದಾರಿಯಲ್ಲಿರುವ ಪವಿತ್ರ ಮೂಗೂರು ತಿಬ್ಬಾದೇವಿ ದೇವಾಲಯ ಒಳಗೊಂಡಂತೆ ಪವಿತ್ರ ಯಾತ್ರಾ ಸ್ಥಳವು ಆಗಿರುವ ಮೂಗೂರು ದೊಡ್ಡ ಹೋಬಳಿ ಕೇಂದ್ರವೂ ಕೂಡ ಆಗಿದ್ದು,ಇದೆಲ್ಲವನ್ನು ಮನಗಂಡು ಕಳೆದ 40 ವರ್ಷಗಳ ಹಿಂದೆಯೇ ಉಪ ಠಾಣೆ ತೆರೆಯಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಠಾಣೆಗೆ ಸಿಬ್ಬಂದಿ ನೇಮಕ ಮಾಡದೆ ಸಿಬ್ಬಂದಿ ಕೊರತೆಯಿಂದ ಠಾಣೆಗೆ ಬೀಗ ಜಡಿಯಲಾಗಿದೆ. ಪ್ರಸ್ತುತ ಒಬ್ಬ ಮುಖ್ಯ ಪೇದೆ ಹಾಗೂ ಒಬ್ಬ ಪೇದೆ ಮಾತ್ರ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. ಇಬ್ಬರೂ ಸಿಬ್ಬಂದಿ ಬೇರೆಡೆಗೆ ಬಂದೋಬಸ್ತ್ ಕೆಲಸಕ್ಕೆ ನಿಯೋಜನೆ ಮಾಡಿರುವ ಹಿನ್ನಲೆ.ಮೂಗುರು ಪೊಲೀಸ್ ಉಪ ಠಾಣೆಗೆ ಬೀಗ ಜಡಿಯಲಾಗಿದೆ.
ಪ್ರಸಿದ್ಧ ದೇವಾಲಯಗಳಿರುವ ಮೂಗೂರಿಗೆ ಪ್ರತಿನಿತ್ಯ ವಿವಿಧ ಕಡೆಯಿಂದ ನೂರಾರು ಭಕ್ತರು ಆಗಮಿಸುತ್ತಿದ್ದು ಅಲ್ಲದ ಹೆದ್ದಾರಿ ರಸ್ತೆ ಹಾದು ಹೋಗಿದ್ದು ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂಬುದು ಅಲ್ಲಿನ ನಾಗರೀಕರ ಪ್ರಶ್ನೆಯಾಗಿದೆ. ತಕ್ಷಣ ಪೊಲೀಸ್ ಉಪಠಾಣೆಗೆ ಅವಶ್ಯಕತೆಗೆ ತಕ್ಕಷ್ಟು ಸಿಬ್ಬಂದಿ ನೇಮಕ ಮಾಡಿ ಕಾನೂನು ಸುವ್ಯವಸ್ಥೆಗೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.