Thursday, July 23, 2026
Homeರಾಜ್ಯಬೆಳಗಾವಿ : ದುಡಿದ ಸಂಬಳ ಕೇಳಿದಕ್ಕೆ ಮಾಲೀಕನಿಂದ ಹಲ್ಲೆ,ಮನನೊಂದ ಕಾರ್ಮಿಕ ಕಂಬ ಏರಿ ಆತ್ಮಹತ್ಯೆಗೆ ಯತ್ನ...

ಬೆಳಗಾವಿ : ದುಡಿದ ಸಂಬಳ ಕೇಳಿದಕ್ಕೆ ಮಾಲೀಕನಿಂದ ಹಲ್ಲೆ,ಮನನೊಂದ ಕಾರ್ಮಿಕ ಕಂಬ ಏರಿ ಆತ್ಮಹತ್ಯೆಗೆ ಯತ್ನ …!

ಬೆಳಗಾವಿ : ಮೂರು ತಿಂಗಳಿಂದ ವೇತನ ನೀಡದಿದ್ದಕ್ಕೆ ಜಾಹಿರಾತಿಗೆ ಅಳವಡಿಸಿರುವ ಕಂಬ ಏರಿ ಕಾರ್ಮಿಕ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ಸಂಗಮ್ ಹೊಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ. ಮಾಲೀಕ ಚಂದ್ರಶೇಖರ್ ಶೆಟ್ಟಿ ಎಂಬಾತನಿಂದ ಸಂಬಳ ಕೇಳಿದ್ದಕ್ಕೆ ಕಾರ್ಮಿಕನ ಮೇಲೆ ಹಲ್ಲೆನಡೆಸಿದ್ದಾನೆಂದು ತಿಳಿದಿದೆ.

ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ ಮಾಲೀಕ ಚಂದ್ರಶೇಖರ್ ಶೆಟ್ಟಿ. ಇದರಿಂದ ಮನನೊಂದು ಹೊಟೆಲ್ ಎದುರಿನ ಬ್ಯಾನರ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯ ಆಟೋ ಚಾಲಕ ಕಂಬ ಏರಿ ಕಾರ್ಮಿಕನ ಜೀವ ಕಾಪಾಡಿದ್ದಾನೆ . ಕಾರ್ಮಿಕನನ್ನ ಕಾಪಾಡಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಡೆದ ಘಟನೆ ನಡೆದಿದ್ದು ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular