Tuesday, May 19, 2026
Flats for sale
Homeರಾಜ್ಯವಿಜಯಪುರ ; ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಅನುಭವ : ಗ್ರಾಮದ ಹಲವೆಡೆ ಕಂಪಿಸಿದ ಭೂಮಿ, ತಿಕೋಟ...

ವಿಜಯಪುರ ; ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಅನುಭವ : ಗ್ರಾಮದ ಹಲವೆಡೆ ಕಂಪಿಸಿದ ಭೂಮಿ, ತಿಕೋಟ ಭಾಗದ ಜನರಲ್ಲಿ ಆತಂಕ.

ವಿಜಯಪುರ : ಜಿಲ್ಲೆಯ ತಿಕೋಟ ಭಾಗದಲ್ಲಿ ಇಂದು ಮತ್ತೆ ಭೂಕಂಪನದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಇಂದು ಬೆಳಿಗ್ಗೆ ಸುಮಾರು 11.26ರ ವೇಳೆಗೆ ತಿಕೋಟ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಘೋಣಸಗಿ, ಕಳ್ಳವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಟ್ಟಿ ಹಾಗೂ ಮಲಕನ ದೇವರಟ್ಟಿ ಭಾಗಗಳಲ್ಲಿ ಭೂಕಂಪನದ ಅನುಭವವಾಗಿರುವ ಮಾಹಿತಿ ಲಭ್ಯವಾಗಿದೆ.

ಭಾರೀ ಸ್ಫೋಟದಂತಹ ಶಬ್ದ ಕೇಳಿಬಂದ ಬಳಿಕ ಭೂಮಿ ನಡುಗಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಏಕಾಏಕಿ ಉಂಟಾದ ಕಂಪನದಿಂದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ತಿಕೋಟ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಭೂಕಂಪನದ ತೀವ್ರತೆ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಆಗಾಗ ಭೂಕಂಪನದ ಅನುಭವವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular