Tuesday, July 21, 2026
Homeಜಿಲ್ಲೆಬೆಳ್ತಂಗಡಿ ; ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಅಂಗಡಿ ಭಸ್ಮ,ಬೆಲೆಬಾಳುವ ವಸ್ತುಗಳು ಬೆಕಿಗಾಹುತಿ.

ಬೆಳ್ತಂಗಡಿ ; ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಅಂಗಡಿ ಭಸ್ಮ,ಬೆಲೆಬಾಳುವ ವಸ್ತುಗಳು ಬೆಕಿಗಾಹುತಿ.

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಅಗ್ನಿ ಅವಘಡ ಉಂಟಾಗಿದೆ. ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಅಂಗಡಿ ಭಸ್ಮವಾದ ಘಟನೆ ನಡೆದಿದೆ. ಬೆಳ್ತಂಗಡಿ ನಗರದ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ಬೆಳ್ಳಂಬೆಳಿಗ್ಗೆ ಈ ಅವಘಡ ಸಂಭವಿಸಿದ್ದು ಕೆಎಎಫ್ ಕ್ರಿಯೇಟಿವ್ ಹೆಸರಿನ ಶಾಪ್ ನಲ್ಲಿ ಘಟನೆ ನಡೆದಿದೆ.

ಶಾಪ್ ನಲ್ಲಿ ಹೀಲಿಯಂ ತುಂಬಿದ ಗ್ಯಾಸ್ ಬಲೂನ್ ನಿಂದ ಸೋರಿಕೆಯಾದ ಕಾರಣ ಶಾರ್ಟ್ ಸರ್ಕಿಟ್ ನಿಂದ ಕಿಡಿಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಶಾಪ್ ಒಳಗಡೆ ಇದ್ದ ಎಲ್ಲಾ ವಸ್ತುಗಳು ಬೆಕಿಗಾಹುತಿಯಾಗಿದ್ದು ಬೆಳ್ತಂಗಡಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.

ಸ್ಥಳೀಯರಿಂದ ಕೂಡ ಬೆಂಕಿನಂದಿಸುವ ಕಾರ್ಯಚರಣೆ ನಡೆದಿದ್ದು ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದಿದೆ. ಅಂಗಡಿ ಮಾಲೀಕ ಈ ಘಟನೆ ನೋಡಿ ಮೂರ್ಛೆ ತಪ್ಪಿದ್ದು ಬಳಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular