Monday, August 17, 2026
Homeಜಿಲ್ಲೆಬೆಂಗಳೂರು ; ಡಿಎನ್ಎ ವರದಿ ಬಹಿರಂಗ : ಬಿಜೆಪಿ ಮುಖಂಡ ಪುತ್ರನೇ ಮಗುವಿನ ತಂದೆ —...

ಬೆಂಗಳೂರು ; ಡಿಎನ್ಎ ವರದಿ ಬಹಿರಂಗ : ಬಿಜೆಪಿ ಮುಖಂಡ ಪುತ್ರನೇ ಮಗುವಿನ ತಂದೆ — ಮದುವೆ ಅಥವಾ ಜೀವನಾಂಶ ನೀಡಲು ಹೈಕೋರ್ಟ್ ಸೂಚನೆ..!

ಬೆಂಗಳೂರು : ಪುತ್ತೂರು ಬಿಜೆಪಿ ಮುಖಂಡನ ಪುತ್ರನ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್ಎ ವರದಿ ಮಹತ್ವದ ತಿರುವು ನೀಡಿದೆ.

ಪುತ್ತೂರು ನಗರ ಪುರಸಭೆ ಸದಸ್ಯ P. G. Jagannivasa Rao ಅವರ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಗರ್ಭಿಣಿಯಾದ ಬಳಿಕ ಯುವತಿಯನ್ನು ವಂಚಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಡಿಎನ್ಎ ಪರೀಕ್ಷಾ ವರದಿ ಲಭ್ಯವಾಗಿದ್ದು, ಮಗುವಿನ ತಂದೆ ಕೃಷ್ಣ ಜೆ. ರಾವ್ ಎಂಬುದು ದೃಢಪಟ್ಟಿದೆ. ಪ್ರಕರಣ ರದ್ದುಪಡಿಸುವಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ Karnataka High Court, ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಯುವತಿಗೆ ಆರೋಪಿಯಿಂದಲೇ ಮಗು ಜನಿಸಿರುವುದರಿಂದ ಮದುವೆಯಾಗುವುದು ಸೂಕ್ತ ಎಂಬುದಾಗಿ ನ್ಯಾಯಾಲಯ ಸೂಚಿಸಿದೆ.

ಇದೇ ವೇಳೆ, ಯುವತಿ ಹಾಗೂ ಮಗುವನ್ನು ಅನಾಥರನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ ಎಂದು ನ್ಯಾಯಮೂರ್ತಿ M. Nagaprasanna ಅಭಿಪ್ರಾಯಪಟ್ಟಿದ್ದಾರೆ. ಇಲ್ಲದಿದ್ದರೆ ಯುವತಿಗೆ ಪ್ರತಿ ತಿಂಗಳು ₹10,000 ಜೀವನಾಂಶ ನೀಡಲು ಸಿದ್ಧರಿದ್ದೀರಾ ಎಂದು ನ್ಯಾಯಾಲಯ ಪ್ರಶ್ನಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular