ಬೆಂಗಳೂರು : ಸೆಪ್ಟೆಂಬರ್ ಕ್ರಾಂತಿ ಆಗಲಿದೆ ಎಂದು ಈ ಹಿಂದೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಇದೀಗ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಯಾರೋ ಮಾಟಮಂತ್ರ ಮಾಡಿಸಿರುವ ಅನುಮಾನವಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಇತ್ತೀಚಿನ ರಾಜಕೀಯ ಹಾಗೂ ಜನರ ನಡುವಿನ ಮಾತು ಕೇಳಿದರೆ ಮಾಟ ಮಂತ್ರ ಮಾಡಿರಬಹುದು ಎನಿಸುತ್ತದೆ ಎಂದ ರಾಜಣ್ಣ, ಮೇ ತಿಂಗಳಲ್ಲಿ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಮತ್ತೆ ಭವಿಷ್ಯ ನುಡಿದ ರಾಜಣ್ಣ, ಯಾವರೀತಿ ಎನ್ನುವುದಕ್ಕೆ ಕಾದುನೋಡಿ ಎಂದಷ್ಟೇ ಚುಟುಕು ಉತ್ತರ ನೀಡಿದರು
ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರದ್ದು ವರ್ಣರಂಜಿತ ಅಷ್ಟೇ ಅಲ್ಲ ವಿವಾದಾತ್ಮಕ ವ್ಯಕ್ತಿತ್ವ. ಇದಕ್ಕೆ ಪುಷ್ಠಿ ಎಂಬAತೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಯಾರೋ ಮಾಟಮಂತ್ರ ಮಾಡ್ಸಿರುವ ಸಾಧ್ಯತೆ ಇದೆ. ಜೊತೆಗೆ ಮೇ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ನೀಡಿರುವ ಕುತೂಹಲಕಾರಿ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನನಗಂತೂ ಅನುಮಾನವಿದೆ : ಬೆಂಗಳೂರಿನ ಶಾಸಕರ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ನಿಂತ ನೀರಲ್ಲ. ಬದಲಾವಣೆ ಜಗದ ನಿಯಮ. ಮೇನಲ್ಲಿ ಮಹತ್ವದ ರಾಜಕೀಯ ಬದಲಾವಣೆ ಸಾಧ್ಯತೆ ಇದೆ ಎಂದರು. ಮುಂದುವರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೋ ಅಸಹಾಯಕರಾದಂತಿದೆ ಎAದಿದ್ದ ರಾಜಣ್ಣ, ಸಿಎಂ ಮೇಲೆ ಯಾರೋ ಮನುಷ್ಯ ಪ್ರಭಾವ ಬೀರಿರಬೇಕು ಇಲ್ಲವೇ ಅವರಿಗೆ ಯಾರೋ ಮಾಟಮಂತ್ರ ಮಾಡಿಸಿರಬಹುದು. ಇದು ನಿಜವಾಗಿ ಆಗಿದೆಯೋ ಇಲ್ಲವೋ ಎಂಬುದು ನನಗೂ ಖಚಿತವಾಗಿ ತಿಳಿದಿಲ್ಲ. ಆದರೆ ನಾನು ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಗಟ್ಟಿ ಮನುಷ್ಯ ನಾನಾಗಲೀ ಅಥವಾ ಸಿದ್ದರಾಮಯ್ಯ ಆಗಲೀ ಮಾಟಮಂತ್ರದAತಹ ಮೂಢನಂಬಿಕೆಗಳನ್ನು ನAಬುವವರಲ್ಲ. ಆದರೆ ಇತ್ತೀಚಿನ ಕೆಲವು
ರಾಜಕೀಯ ವಿದ್ಯಮಾನಗಳು ಹಾಗೂ ಜನರ ನಡುವಿನ ಮಾತುಕತೆಗಳನ್ನು ಗಮನಿಸಿದರೆ ಇಂತಹ ಒಂದು ಅನುಮಾನ ಮೂಡುತ್ತಿದೆ. ಇತ್ತೀಚೆಗಷ್ಟೆ ನನ್ನನ್ನು ಕರೆಸಿ ಸಿಎಂ ಸುದೀರ್ಘವಾಗಿ ಮಾತನಾಡಿದ್ದನ್ನು ನೆನಪಿಸಿಕೊಂಡ ರಾಜಣ್ಣ, ಮುಖ್ಯಮಂತ್ರಿ ಅಷ್ಟೊಂದು ಅಸಹಾಯಕರೇನಲ್ಲ. ಯಾವುದನ್ನೂ ಸಮರ್ಥವಾಗಿ ಎದುರಿಸುವಷ್ಟು ಗಟ್ಟಿಯಾಗಿದ್ದಾರೆ ಎಂದರು. ಆದರೆ ದಿಢೀರನೆ ರಾಜಣ್ಣ ಅವರಿಗೆ ಇಂತಹ ಅನುಮಾನ ಏಕೆ ಹುಟ್ಟಿಕೊಂಡಿದೆ ಎನ್ನುವುದು ಮಾತ್ರ ಗಮನಾರ್ಹವಾಗಿದೆ.


