Monday, August 17, 2026
Homeರಾಜ್ಯಬೆಂಗಳೂರು : ವಾಹನ ಸವಾರರಿಗೆ ಬಿಗ್ ಶಾಕ್,ಎಮಿಷನ್ ಟೆಸ್ಟ್ ಶುಲ್ಕ ಏರಿಕೆ ; ₹40ರವರೆಗೆ...

ಬೆಂಗಳೂರು : ವಾಹನ ಸವಾರರಿಗೆ ಬಿಗ್ ಶಾಕ್,ಎಮಿಷನ್ ಟೆಸ್ಟ್ ಶುಲ್ಕ ಏರಿಕೆ ; ₹40ರವರೆಗೆ ಹೆಚ್ಚಳ…!

ಬೆಂಗಳೂರು : ರಾಜ್ಯದಲ್ಲಿ ವಿವಿಧ ಮಾದರಿಯ ವಾಹನಗಳ ವಾಯು ಮಾಲಿನ್ಯ ಪರೀಕ್ಷೆ (ಎಮಿಷನ್ ಟೆಸ್ಟ್) ಶುಲ್ಕವನ್ನು ಸಾರಿಗೆ ಇಲಾಖೆ ಪರಿಷ್ಕರಿಸಿದೆ. ಹೊಸ ದರದಂತೆ ಕನಿಷ್ಠ ₹5ರಿಂದ ಗರಿಷ್ಠ ₹40ರವರೆಗೆ ಶುಲ್ಕ ಹೆಚ್ಚಳವಾಗಿದೆ.

ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರು ಕಾರ್ಯಾಚರಣೆ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆ.13ರಂದು ಹೊಸ ದರಗಳ ಅಧಿಸೂಚನೆ ಹೊರಡಿಸಿದೆ.

ಹೊಸ ದರ ಎಷ್ಟು?
ದ್ವಿಚಕ್ರ ವಾಹನ: ₹65ರಿಂದ ₹80ಕ್ಕೆ
ಆಟೋರಿಕ್ಷಾ: ₹75ರಿಂದ ₹80ಕ್ಕೆ


ಪೆಟ್ರೋಲ್/ಸಿಎನ್‌ಜಿ/ಎಲ್‌ಪಿಜಿ ನಾಲ್ಕು ಚಕ್ರ ವಾಹನ: ₹115ರಿಂದ ₹150ಕ್ಕೆ

ಡೀಸೆಲ್ ವಾಹನಗಳು: ₹160ರಿಂದ ₹200ಕ್ಕೆ

ಈ ಮೂಲಕ ದ್ವಿಚಕ್ರ ವಾಹನಗಳ ಎಮಿಷನ್ ಟೆಸ್ಟ್ ಶುಲ್ಕ ₹15 ಹೆಚ್ಚಳವಾಗಿದ್ದು, ನಾಲ್ಕು ಚಕ್ರದ ಪೆಟ್ರೋಲ್/ಸಿಎನ್‌ಜಿ/ಎಲ್‌ಪಿಜಿ ವಾಹನಗಳಿಗೆ ₹35 ಹಾಗೂ ಡೀಸೆಲ್ ವಾಹನಗಳಿಗೆ ₹40 ಹೆಚ್ಚಳವಾಗಿದೆ.

2022ರ ಏಪ್ರಿಲ್‌ನಲ್ಲಿ ಕೊನೆಯ ಬಾರಿ ಎಮಿಷನ್ ಟೆಸ್ಟ್ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಹೊಸ ದರಗಳನ್ನು ಜಾರಿಗೆ ತರಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular