ಮಡಿಕೇರಿ: ಇಲ್ಲಿನ ವೀರಾಜಪೇಟೆ ತಾಲೂಕಿನ ನಂಗಾಲ ಗ್ರಾಮದಲ್ಲಿ ಜನವರಿ 16ರಂದು 24 ವರ್ಷದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತರನ್ನು ನಂಗಾಲ ಗ್ರಾಮದ ಬುಟ್ಟಿಯಂಡ ಮಾದಪ್ಪ ಅವರ ಪುತ್ರಿ ಆರತಿ (24) ಎಂದು ಗುರುತಿಸಲಾಗಿದೆ.
ವಿರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕೊಲೆಗೆ ಕಾರಣ ಹುಡುಕುತ್ತಿದ್ದಾರೆ.
ಕೆಲ ದಿನಗಳಿಂದ ಕೊಡಗಿನಲ್ಲಿ ಇಂತಹ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ ಯುವತಿಯ ಹತ್ಯೆ ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.
ವಿರಾಜಪೇಟೆ ಪೊಲೀಸರು ತಿಮ್ಮಯ್ಯನ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.