ಮಂಡ್ಯ : ಜಿಲ್ಲೆಯಲ್ಲಿ ಭಾನುವಾರ ಸಂಕ್ರಾಂತಿ ಆಚರಣೆ ವೇಳೆ ದನಕರುಗಳಿಗೆ ಬೆಂಕಿ ಹಚ್ಚುವ ‘ಕಿಚ್ಚು ಹಾಯಿಸುವುದು’ ಆಚರಣೆ ವೇಳೆ 12 ಮಂದಿಗೆ ಸುಟ್ಟ ಗಾಯಗಳಾಗಿವೆ.
ಓರ್ವ ಯುವಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚೀರನಹಳ್ಳಿ, ಹೊಸಹಳ್ಳಿ, ಸ್ವರ್ಣಸಂದ್ರ ಬಡಾವಣೆಗಳಲ್ಲಿ ಈ ಘಟನೆಗಳು ವರದಿಯಾಗಿವೆ.
ಗಾಯಾಳುಗಳು ಹೋರಿಗಳ ಜೊತೆಗೆ ಓಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆರೋಪಿಸಲಾಗಿದೆ.