Sunday, March 15, 2026
Flats for sale
Homeರಾಜ್ಯಬಾಗಲಕೋಟೆ : ಉಚಿತ ಬಸ್ ಯೋಜನೆಯಿಂದ ಬದಲಾದ ಕಾಲೇಜಿನ ವೇಳಾಪಟ್ಟಿ,ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬಾರದ ವಿದ್ಯಾರ್ಥಿಗಳು.

ಬಾಗಲಕೋಟೆ : ಉಚಿತ ಬಸ್ ಯೋಜನೆಯಿಂದ ಬದಲಾದ ಕಾಲೇಜಿನ ವೇಳಾಪಟ್ಟಿ,ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬಾರದ ವಿದ್ಯಾರ್ಥಿಗಳು.

ಬಾಗಲಕೋಟೆ : ಗ್ಯಾರಂಟೀ ಭಾಗ್ಯಗಳ ಮೂಲಕ ಆಡಳಿತಕ್ಕೆ ಬಂದ ಸರಕಾರ ನೀಡಿದ ಉಚಿತ ಬಸ್ ಯೋಜನೆಯಿಂದ ವಿದ್ಯಾರ್ಥಿಗಳ ಕಾಲೇಜಿನ ಸಮಯವನ್ನೇ ಬದಲಿಸಿದೆ. ಯಾಕೆಂದರೆ ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ ಮಹಿಳೆಯರುಉಚಿತವಾಗಿ ಬಸ್‌ ‌ನಲ್ಲಿ ಓಡಾಡುತ್ತಿದ್ದು ಇದರಿಂದ ಕೆ ಎಸ್ ಆರ್ ಟಿ ಸಿ ಬಸ್ ಗಳು ದಿನಾಲು ಭರ್ತಿಯಾಗಿ ಹೊರಟಿವೆ. ಆದರೆ ಶಕ್ತಿ ‌ಯೋಜನೆ ವಿದ್ಯಾರ್ಥಿಗಳ ಶಿಕ್ಷಣವನ್ನು ‌ನಿಶ್ಯಕ್ತಿ‌‌ಗೊಳಿಸುತ್ತಿದೆ.ಬಸ್ ಇಲ್ಲದೆ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತಗೊಳ್ಳುತ್ತಿದ್ದು ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಸರಿಯಾದ ಸಮಯಕ್ಕೆ ಹೋಗದೆ ಕಲಿಕೆಗೆ ಸಮಸ್ಯೆ ಉಂಟಾಗಿದೆ.

ಬೆಳಗಿನ ಜಾವ ಹಳ್ಳಿಗಳಿಂದ ಪಟ್ಟಣದ ಕಡೆಗೆ ಗಂಟೆಗೊಂದು ಬಸ್ ಸಂಚರಿಸುತ್ತಿದ್ದು ಕಾಲು ಇಡೋಕು ಆಗದಷ್ಟು ರಶ್ ಆಗಿದ್ದು ಹೇಗಾದರೂ ಮಾಡಿ ಬಸ್ ನಲ್ಲಿ ಹೋಗಲೇಬೇಕೆಂದು ಬಾಗಿಲಿಗೆ ಜೋತು ಬಿದ್ದು ಹೊರಟ ವಿದ್ಯಾರ್ಥಿಗಳು. ಇನ್ನೊಂದು ಕಡೆ ಕಾಲೇಜಿನಲ್ಲಿ ಬೆಂಚ್ ಗಳು ಖಾಲಿ ಖಾಲಿಯಾಗಿದೆ. ಕಾಲೇಜಿನಲ್ಲಿ‌ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದು ಈ ಗ್ಯಾರಂಟಿ ಯೋಜನೆ ಎಫೆಕ್ಟ್ ನಿಂದ ಬಾಗಲಕೋಟೆ ಹಾಗೂ ರಾಜ್ಯದ ಇನ್ನಿತರ ತಾಲೂಕಿನಲ್ಲಿ ವಿದ್ಯಾರ್ಥಿಗಳ ಜೀವನವೇ ಅಲ್ಲೊಲ್ಲ ಕಲ್ಲೋಲ ಆದಂತಿದೆ .

ವಿಧ್ಯಾರ್ಗಳಿಗೆ ಗ್ರಾಮೀಣ ಭಾಗದಿಂದ‌ ಬಸ್ ‌ಮೂಲಕ ಕಾಲೇಜಿಗೆ ಬರೋದು ಎಂದರೆ ಒಂದು ದೊಡ್ಡ ಸಾಹಸ ಮತ್ತು ಅದೊಂದು ಯುದ್ದ ಮಾಡಿ ಬಂದ ಅನುಭವವಾಗುತ್ತಿದೆ.ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಬಸ್‌ ‌ನಲ್ಲಿ ಓಡಾದುದರ ಪರಿಣಾಮ ವಿದ್ಯಾರ್ಥಿಗಳ‌‌ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದೆ.

ಮೊದಲ ಅವಧಿಯ ಕ್ಲಾಸ್ ಅರ್ಧಕ್ಕೆ ಅರ್ಧದಷ್ಟು ಖಾಲಿಯಾಗಿದ್ದು ಇದಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಬಾರದೆ ಇರುವುದು ಒಂದು ಮುಖ್ಯ ಕಾರಣ ,ಬಸ್ ಬಂದರೂ ಕಾಲು ಇಡೋಕು ಜಾಗವಿರೋದಿಲ್ಲ ಇದರಿಂದ ಕಾಲೇಜಿಗೆ ಬರಲು ತಡವಾಗುತ್ತಿದೆ,ಮೊದಲ ಅವಧಿಯ ಕ್ಲಾಸ್ ಅರ್ಧಕ್ಕೆ ಅರ್ಧದಷ್ಟು ಖಾಲಿಯಾಗಿರುತ್ತದೆ.ಇದರಿಂದ‌ ನಮ್ಮ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ.ಗ್ರಾಮೀಣ ಭಾಗಲ್ಕೆ ಶಾಲಾಕಾಲೇಜು ಅವಧಿ ವೇಳೆ ಹೆಚ್ಚುವರಿ ಬಸದ ಬಿಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.

ಬಡ ಹಾಗೂ ಮದ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಸಂಚರಿಸುವುದರಿಂದ ಹಾಗೂ ಈ ಬಸ್ ಗಳನ್ನೇ ಅವಲಂಬಿತವಾಗಿರುವುದರಿಂದ ವಿದ್ಯಾರ್ಥಿಗಳ ಶಾಲಾ ಕಾಲೇಜಿನ ಚಟುವಟಿಕೆಗಳಲ್ಲಿ ಕುಂಠಿತವಾಗುತ್ತಿದೆ ಎಂದು ಹಿರಿಯ ಉಪನ್ಯಾಸಕರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular