ಬೆಂಗಳೂರು :ಭ್ರೂಣ ಹತ್ಯೆಮಾಡಿದ ಆರೋಪಿಗಳಿಂದ ರೋಚಕ ಮಾಹಿತಿ ಲಭ್ಯವಾಗಿದ್ದು ಮಂಡ್ಯದಲ್ಲಿ ಪತ್ತೆಯಾದ ಹೆಣ್ಣು ಭ್ರೂಣ ಹತ್ಯೆ ಜಾಲ ಇದುವರೆಗೆ 3 ಸಾವಿರ ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.
ಮಂಡ್ಯದಲ್ಲೇ ಅಂದಾಜು900೦ ಭ್ರೂಣ ಹತ್ಯೆ ಮಾಡಿರುವುದಾಗಿ ಬಂಧಿತರು ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ ಕಡಿಮೆ ಅಂದರೆ ಸಾವಿರ ಭ್ರೂಣ ಹತ್ಯೆ ಮಾಡುತ್ತಿದ್ದದ್ದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ಮಂಡ್ಯದಲ್ಲಿ ಆರಂಭವಾದ ಈ ಜಾಲ ವಿವಿಧ ಜಿಲ್ಲೆಗಳಿಗೆ ಹರಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಸ್ಯವೇ ಕಾರಣವಾಗಿದೆ. ಮಂಡ್ಯದಲ್ಲಿ 3 ವರ್ಷಗಳ ಹಿಂದೆ ಈ ಜಾಲದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇತ್ತು. ಆದರೆ ಅವರು ನಿರ್ಲಕ್ಸ್ಯ ವಹಿಸಿದ ಹಿನ್ನೆಲೆಯಲ್ಲಿ ಸಾವಿರಾರು ಹೆಣ್ಣು ಭ್ರೂಣಗಳ ಹತ್ಯೆಯಾಗಿದೆ.
ಬೆಂಗಳೂರಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಕಾರು ನಿಲ್ಲಿಸದೆ ಪರಾರಿಯಾಗುತ್ತಿದ್ದರು. ಅನುಮಾನ ಬಂದ ಪೊಲೀಸರು ವಾಹನ ಹಿಂಬಾಲಿಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೆಣ್ಣು ಭ್ರೂಣ ಹತ್ಯೆ ಜಾಲ ಪತ್ತೆಯಾಯಿತು.
ಆರೋಪಿಗಳು ಮಂಡ್ಯದ ಹಾಡ್ಯ ಗ್ರಾಮದ ನಿರ್ಜನ ಪ್ರದೇಶದಲ್ಲಿರುವ ಇರುವ ಆಲೆಮನೆಯಲ್ಲಿ ಭ್ರೂಣ ಪರೀಕ್ಷೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಯಿತು. ಪೊಲೀಸರು ಆಲೆಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಎರಡು ವರ್ಷಗಳಿಂದ ಭ್ರೂಣ ಹತ್ಯೆ ಮಾಡಲಾಗುತ್ತಿದ್ದು, ವರ್ಷಕ್ಕೆ ಕನಿಷ್ಠ 1000 ಭ್ರೂಣ ಹತ್ಯೆ ಮಾಡಿರುವ ಶಂಕೆ ಇದೆ.
ಪೊಲೀಸರ ತನಿಖೆಯಲ್ಲಿ ಮೂರು ವರ್ಷಗಳಿಂದ ಆರೋಪಿಗಳು ಭ್ರೂಣ ಹತ್ಯೆ ನಡೆಸುತ್ತಿರುವುದು ಬಹಿರಂಗವಾಗಿದೆ. 3 ವರ್ಷಗಳಲ್ಲಿ3 ಸಾವಿರ ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ.
ಗರ್ಭಿಣಿಯರ ಪಾಲಕರು, ಪತಿ ಸೇರಿದಂತೆ ಕುಟುAಬದವರ ಬೆಂಬಲದಿAದಲೇ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿತ್ತು. ಭ್ರೂಣ ಹೆಣ್ಣು ಎಂದು ಪತ್ತೆಯಾದ ಕೂಡಲೇ ಹತ್ಯೆ ಮಾಡುತ್ತಿದ್ದರು. ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ವೈದ್ಯರು, ಮೂವರು ಪ್ರಯೋಗಾಲಯ ತಂತ್ರಜ್ಞರು ಹಾಗೂ ಮಧ್ಯವರ್ತಿಗಳು ಸೇರಿದಂತೆ 9 ಮಂದಿಯನ್ನು ಬAಧಿಸಿದ್ದಾರೆ. ಬಂಧಿತರು ಮಂಡ್ಯ ಹಾಗೂ ಮೈಸೂರು ಮೂಲದವರಾಗಿದ್ದಾರೆ.
ಹಳ್ಳಿಗಳಿಗೆ ತೆರಳಿ ಸ್ಕ್ಯಾನ್ ಮಾಡುತ್ತಿದ್ದ ಆರೋಪಿಗಳು ಭೂಣ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದರೂ ಮಂಡ್ಯದಲ್ಲಿ ಮಾತ್ರ ಕಾನೂನು ಮೀರಿ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡಲಾಗುತ್ತಿದೆ. ಹಾಡ್ಯ ಗ್ರಾಮ ಅಲ್ಲದೆ ವಾಹನದ ಮೂಲಕ ಆರೋಪಿಗಳು ಹಳ್ಳಿಗಳಿಗೂ ತೆರಳಿ ಗರ್ಭಿಣಿಯರನ್ನು ವಾಹನದಲ್ಲೇ ಸ್ಕ್ಯಾನ್ ಮಾಡಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು. ಭ್ರೂಣ ಹೆಣ್ಣಾಗಿದ್ದರೆ ಅನ್ಯ ಸ್ಥಳದಲ್ಲಿ ಭೇಟಿ ಮಾಡುವಂತೆ ಸೂಚಿಸಲಾಗುತ್ತಿತ್ತು. ಅಲ್ಲಿಗೆ ತೆರಳಿದ ಗರ್ಭಿಣಿಯರಿಗೆ ಭ್ರೂಣ ಹತ್ಯೆ ಮಾಡಲಾಗುತ್ತಿತ್ತು.


