Tuesday, September 1, 2026
Homeಜಿಲ್ಲೆಪುತ್ತೂರು : ಕಾಂಗ್ರೆಸ್ ಒಳಜಗಳ ಸ್ಫೋಟ : ಶಾಸಕ ಅಶೋಕ್ ರೈ ಸಮ್ಮುಖದಲ್ಲೇ ಬೆಂಬಲಿಗರ ಆಕ್ರೋಶ,...

ಪುತ್ತೂರು : ಕಾಂಗ್ರೆಸ್ ಒಳಜಗಳ ಸ್ಫೋಟ : ಶಾಸಕ ಅಶೋಕ್ ರೈ ಸಮ್ಮುಖದಲ್ಲೇ ಬೆಂಬಲಿಗರ ಆಕ್ರೋಶ, ಪೊಲೀಸ್ ಭದ್ರತೆಯಲ್ಲಿ ಹಕೀಂ ಮನೆಗೆ.

ಪುತ್ತೂರು : ಶಾಸಕ ಅಶೋಕ್ ರೈ ವಿರುದ್ಧ ಇತ್ತೀಚೆಗೆ ಆಡಿಯೋ ಹರಿಬಿಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರು ಸೆ.1ರಂದು ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಗೆ ಆಗಮಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.

ಶಾಸಕರ ವಿರುದ್ಧ ಆಡಿಯೋ ಹರಿಬಿಟ್ಟಿರುವುದಕ್ಕೆ ಆಕ್ರೋಶಗೊಂಡ ಅಶೋಕ್ ರೈ ಬೆಂಬಲಿಗರು ಪತ್ರಿಕಾಭವನದ ಮುಂದೆ ಜಮಾಯಿಸಿ ಹಕೀಂ ಕೂರ್ನಡ್ಕ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಶಾಸಕ ಅಶೋಕ್ ರೈ ಕೂಡ ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಹಕೀಂ ಕೂರ್ನಡ್ಕ ಅವರು ಪತ್ರಿಕಾಗೋಷ್ಠಿ ನಡೆಸಿದ ಬಳಿಕವೂ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಹಕೀಂ ಅವರನ್ನು ಪೊಲೀಸ್ ಭದ್ರತೆಯಲ್ಲಿ ಪೊಲೀಸ್ ಜೀಪಿನಲ್ಲೇ ಕರೆದೊಯ್ದರು.

ಈ ವೇಳೆ ಹಕೀಂ ಅವರ ಬೆಂಬಲಿಗರಿಬ್ಬರ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಬಳಿಕ ಅಶೋಕ್ ರೈ ಬೆಂಬಲಿಗರನ್ನು ಪೊಲೀಸರು ಚದುರಿಸಿದರು.

ಘಟನೆಯಿಂದ ಪುತ್ತೂರಿನಲ್ಲಿ ಕಾಂಗ್ರೆಸ್‌ನ ಆಂತರಿಕ ಭಿನ್ನಮತ ಬಹಿರಂಗವಾಗಿದ್ದು, ಪೊಲೀಸ್ ಭದ್ರತೆಯ ನಡುವೆ ನಡೆದ ಗಲಾಟೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular