ಬೆಂಗಳೂರು: ನಗರದಲ್ಲಿ ಮನೆಗಳ ಬಾಡಿಗೆ ದುಬಾರಿಯಾಗತೊಡಗಿದೆ. ಈ ವರ್ಷದಲ್ಲೇ ಶೇ.30 ರಷ್ಟು ಬಾಡಿಗೆ ಹೆಚ್ಚಳವಾಗಿದೆ.ಇತ್ತೀಚಿನ ಮಾಹಿತಿಯ ಪ್ರಕಾರ, 2023 ರ ಮೊದಲ ಒಂಬತ್ತು ತಿಂಗಳಲ್ಲಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಸತಿ ಬಾಡಿಗೆಗಳು ಹೆಚ್ಚಿವೆ. ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿ1000 ಚದರ ಅಡಿ ಮನೆ ಬಾಡಿಗೆ ಶೇ.31ರಷ್ಟು ಏರಿಕೆ ಕಂಡಿವೆ.
ಆ ನಂತರ ಸರ್ಜಾಪುರ ರಸ್ತೆಯಲ್ಲಿ ಮನೆಗಳ ಬಾಡಿಗೆ ಶೇ ೨೭ ರಷ್ಟು ಏರಿಕೆಯಾಗಿದೆ. ವೈಟ್‌ಫೀಲ್ಡ್ನಲ್ಲಿ 1000 ಚದರ ಅಡಿಗಳ 2 ಬಿಎಚ್‌ಕೆ ಮನೆಯ ಸರಾಸರಿ ಮಾಸಿಕ ಬಾಡಿಗೆಯು 2022 ರ ಅಂತ್ಯಕ್ಕೆ ತಿಂಗಳಿಗೆ 24,600 ರೂಪಾಯಿಗಳಿತ್ತು. ೨೦೨೩ ರ ಸೆಪ್ಟೆಂಬರ್ ಅಂತ್ಯಕ್ಕೆ ತಿಂಗಳಿಗೆ ೨೮,೫೦೦ ರೂಪಾಯಿ ಏರಿಕೆಯಾಗಿದೆ. ಸರ್ಜಾಪುರ ರಸ್ತೆಯಲ್ಲಿ ಸರಾಸರಿ ಮಾಸಿಕ ಬಾಡಿಗೆಗಳು ರೂ. 24,000 ರಿಂದ 30,500 ರೂ.ಏರಿಕೆಯಾಗಿದೆ.
ಕುತೂಹಲಕಾರಿಯಾಗಿ, ಬಾಡಿಗೆಗಳಲ್ಲಿ ಭಾರಿ ಏರಿಕೆ ಕಂಡಿರುವ ನಗರಗಳೆಂದರೆ ಹೈದರಾಬಾದ್ ಹಾಗೂ ಪುಣೆ ನಗರಗಳು. ಇವೆರಡೂ ನಗರಗಳು ಐಟಿ ಹಬ್‌ಗಳಾಗಿವೆ. ಹೈದರಾಬಾದ್ ೨ನೇ ಅತ್ಯುತ್ತಮ ಬಾಡಿಗೆ ಮೌಲ್ಯದ ಬೆಳವಣಿಗೆಯನ್ನು ಕಂಡಿದೆ.
ಈ ನಗರದಲ್ಲಿ ಶೇ. 24 ರಷ್ಟು ಮನೆ ಬಾಡಿಗೆ ಏರಿಕೆಯಾಗಿದೆ. 2022 ರ ಅಂತ್ಯದ ವೇಳೆಗೆ ಸರಾಸರಿ ಬಾಡಿಗೆ ತಿಂಗಳಿಗೆ 24,600 ರೂಪಾಯಿಗಳಿತ್ತು. ೨೦೨೩ ರ ಅಂತ್ಯದ ವೇಳೆಗೆ, ಇದು ತಿಂಗಳಿಗೆ 28,500 ರೂಪಾಯಿಗೆ ಏರಿಕೆಯಾಗಿದೆ.
ದಿಢೀರ್ ಬಾಡಿಗೆ ದರ ಏರಿಕೆಯಾಗಲು ಐಟಿ ಕಂಪನಿಗಳು ಹಂತ ಹಂತವಾಗಿ ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಇದರಿಂದ ಇಷ್ಟು ದಿನ ಊರಿಗೆ ತೆರಳಿದ್ದವರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕರು ಬಾಡಿಗೆ ದರವನ್ನು ಹೆಚ್ಚಳ ಮಾಡತೊಡಗಿದ್ದಾರೆ.
ವಿಶೇಷ ಎಂದರೆ, ಐಟಿ ಕಂಪನಿಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ವರ್ಷ ಸಿಂಗಲ್ ಬೆಡ್ ರೂಂನ ಬಾಡಿಗೆ ದರ 6 ರಿಂದ 8 ಸಾವಿರ ರೂ. ಇತ್ತು. ಆದರೆ, ಈಗ 10 ಸಾವಿರ ರೂ.ವರೆಗೆ ಏರಿಕೆಯಾಗಿದೆ. ಬಾಡಿಗೆ ಮನೆಗೆ ಬೇಡಿಕೆ ಹೆಚ್ಚಳವಾಗುತ್ತಿರುವುದನ್ನು ಗಮನಿಸಿದ ಮನೆ ಮಾಲೀಕರು ಬಾಡಿಗೆ ದರವನ್ನು ಹೆಚ್ಚಳ ಮಾಡತೊಡಗಿದ್ದಾರೆ.
ಪಿಜಿಗಳಲ್ಲೂ ಹೆಚ್ಚಳ ವರ್ಕ್ ಫ್ರಂ ಹೋಂ ಅವಧಿ ಮುಗಿದು ಈಗ ಕಚೇರಿಯಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಮನೆ ಬಾಡಿಗೆ ಬದಲು ಕೆಲವರು ಪಿಜಿಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಇದರಿಂದ ಪಿಜಿಗಳಲ್ಲೂ ಬಾಡಿಗೆ ಹೆಚ್ಚಳವಾಗಿದೆ. ಸಿಂಗಲ್ ರೂA.ನಲ್ಲಿ ನಾಲ್ವರು ಇದ್ದಲ್ಲಿ ಪ್ರತಿಯೊಬ್ಬರಿಗೆ 10 ಸಾವಿರ ಬಾಡಿಗೆ ವಿಧಿಸಲಾಗುತ್ತಿದೆ.


