ನವದೆಹಲಿ : ದೇಶದಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದ್ದು, ಏಪ್ರಿಲ್ ತಿಂಗಳಲ್ಲಿ ಒಟ್ಟು ₹2.43 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ ಸಂಬಂಧಿತ ಅಂಕಿಅಂಶಗಳು ತಿಳಿಸಿವೆ.
ಇದು ಕಳೆದ ವರ್ಷದ ಏಪ್ರಿಲ್ ತಿಂಗಳ ₹2.23 ಲಕ್ಷ ಕೋಟಿಯೊಂದಿಗೆ ಹೋಲಿಸಿದರೆ 8.7% ಏರಿಕೆ ಆಗಿದೆ.
ಪ್ರಮುಖ ಅಂಶಗಳು : ಸ್ಥಳೀಯ ವಹಿವಾಟಿನಿಂದ ಸಂಗ್ರಹ: ₹1.85 ಲಕ್ಷ ಕೋಟಿ ಕಳೆದ ವರ್ಷಕ್ಕೆ ಹೋಲಿಸಿದರೆ 4.3% ಏರಿಕೆ ಆಮದುಗಳಿಂದ ಸಂಗ್ರಹ: ₹57,580 ಕೋಟಿ 25.8% ಭಾರೀ ಏರಿಕೆಯಾಗಿದೆ. ಈ ಮೂಲಕ ಜಿಎಸ್ಟಿ ಸಂಗ್ರಹವು ಇದುವರೆಗಿನ ಅತಿ ಹೆಚ್ಚು ಮಟ್ಟವನ್ನು ತಲುಪಿದೆ.ಒಟ್ಟಿನಲ್ಲಿ, ದೇಶದ ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿರುವುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ.


