Sunday, September 13, 2026
Homeವಾಣಿಜ್ಯನವದೆಹಲಿ : ಆನ್‌ಲೈನ್‌ ಮಾರಾಟಕ್ಕೆ ಹೊಸ ನಿಯಮ : ಮೂಲಬೆಲೆ ದಾಖಲು ಕಡ್ಡಾಯ.

ನವದೆಹಲಿ : ಆನ್‌ಲೈನ್‌ ಮಾರಾಟಕ್ಕೆ ಹೊಸ ನಿಯಮ : ಮೂಲಬೆಲೆ ದಾಖಲು ಕಡ್ಡಾಯ.

ನವದೆಹಲಿ : ಗ್ರಾಹಕರ ರಕ್ಷಣೆಗಾಗಿ ಕೇಂದ್ರ ಸರಕಾರವು ಇ-ಕಾಮರ್ಸ್‌ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ. 2020ರ ಗ್ರಾಹಕ ರಕ್ಷಣೆ (ಇ-ಕಾಮರ್ಸ್‌) ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, 2027ರ ಜ.1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ತಿದ್ದುಪಡಿ ನಿಯಮಗಳ ಪ್ರಕಾರ, ಇ-ಕಾಮರ್ಸ್‌ ವೇದಿಕೆಗಳು ಉತ್ಪನ್ನಗಳ ಬೆಲೆಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರದರ್ಶಿಸಬೇಕು. ಉತ್ಪನ್ನದ ಮೂಲಬೆಲೆ ಹಾಗೂ ಈ ಹಿಂದೆ ಮಾರಾಟ ಮಾಡಲಾದ ಬೆಲೆಯನ್ನು ಸ್ಪಷ್ಟವಾಗಿ ದಾಖಲಿಸುವುದು ಕಡ್ಡಾಯವಾಗಲಿದೆ.

ಪ್ರಮುಖ ಅಂಶಗಳು.

ಉತ್ಪನ್ನದ ಸರಿಯಾದ ಮೂಲಬೆಲೆ ನಮೂದಿಸುವುದು ಕಡ್ಡಾಯ.

ಹಿಂದಿನ ಮಾರಾಟ ಬೆಲೆಯನ್ನೂ ಪ್ರದರ್ಶಿಸಬೇಕು.

ಬೆಲೆ ಮಾಹಿತಿಯಲ್ಲಿ ಗ್ರಾಹಕರಿಗೆ ಗೊಂದಲ ಉಂಟುಮಾಡುವಂತಿಲ್ಲ.

ಗ್ರಾಹಕರ ಸರ್ಚ್‌ ಹಿಸ್ಟರಿಯನ್ನು ತಿರುಚುವಂತಿಲ್ಲ.

ಅನುಮತಿಯಿಲ್ಲದೆ ಗ್ರಾಹಕರ ಮಾಹಿತಿಯನ್ನು ಬಳಸುವಂತಿಲ್ಲ

ಇ-ಕಾಮರ್ಸ್‌ ಸಂಸ್ಥೆಗಳ ಬೆಲೆ ಪಾರದರ್ಶಕತೆಗೆ ಹೆಚ್ಚಿನ ಒತ್ತು

RELATED ARTICLES

LEAVE A REPLY

Please enter your comment!
Please enter your name here

Most Popular