Monday, August 17, 2026
Homeಜಿಲ್ಲೆಮಂಗಳೂರು ; ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು,ವೈದ್ಯರಿಲ್ಲದೆ ಪರದಾಟ,ಬಂಟ್ವಾಳದಲ್ಲಿ ರೈಲು ನಿಲ್ಲಿಸಿ ಹೆರಿಗೆ,...

ಮಂಗಳೂರು ; ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು,ವೈದ್ಯರಿಲ್ಲದೆ ಪರದಾಟ,ಬಂಟ್ವಾಳದಲ್ಲಿ ರೈಲು ನಿಲ್ಲಿಸಿ ಹೆರಿಗೆ, 40 ನಿಮಿಷ ಬಳಿಕ ಆಸ್ಪತ್ರೆಗೆ ಕೊಂಡೊಯ್ಯದ ಪ್ರಯಾಣಿಕರು.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬಿಸಿ ರೋಡ್ ರೈಲ್ವೇ ನಿಲ್ದಾಣದಲ್ಲಿ ಅಪರೂಪದ ಮಾನವೀಯ ಘಟನೆ ನಡೆದಿದೆ. ಕಾರವಾರ–ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ವೇಳೆ, ಸಹಪ್ರಯಾಣಿಕ ಮಹಿಳೆಯರೇ ತುರ್ತು ಸಂದರ್ಭದಲ್ಲಿ ದಾದಿಯರಾಗಿ ಬದಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಘಟನೆ ಗಮನಸೆಳೆದಿದೆ.

ಕಾರವಾರದಿಂದ ಯಶವಂತಪುರಕ್ಕೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು (ಸುಮಾರು 750 ಕಿಮೀ ದೂರವನ್ನು ಸಂಪರ್ಕಿಸುವ ಪ್ರಮುಖ ಮಾರ್ಗ) � ಮಂಗಳೂರು ಭಾಗ ತಲುಪುವ ವೇಳೆ ಈ ಘಟನೆ ನಡೆದಿದೆ. ಮೈಸೂರು ಮೂಲದ ಗರ್ಭಿಣಿ ಮಹಿಳೆ ಮಂಗಳೂರು ಜಂಕ್ಷನ್‌ನಿಂದ ರೈಲು ಏರಿದ್ದು, ಬಿಸಿ ರೋಡ್ ಸಮೀಪ ತೀವ್ರ ಹೆರಿಗೆ ನೋವು ಮತ್ತು ರಕ್ತಸ್ರಾವ ಕಾಣಿಸಿಕೊಂಡಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೇ ಸಿಬ್ಬಂದಿ ರೈಲನ್ನು ತಾತ್ಕಾಲಿಕವಾಗಿ ನಿಲ್ದಾಣದಲ್ಲಿ ನಿಲ್ಲಿಸಿದರು. ವೈದ್ಯಕೀಯ ನೆರವಿಗಾಗಿ ಸುಮಾರು ಅರ್ಧ ಗಂಟೆ ಕಾಯಲಾಗಿದ್ದರೂ, ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗಲಿಲ್ಲ.

ತಾಯಿ ಮತ್ತು ಮಗುವಿನ ಪ್ರಾಣಾಪಾಯವನ್ನು ಮನಗಂಡ ಮಹಿಳಾ ಪ್ರಯಾಣಿಕರು ತಕ್ಷಣ ಮುಂದಾಗಿದರು. ರೈಲು ಬೋಗಿಯಲ್ಲೇ ಬೆಡ್‌ಶೀಟ್‌ಗಳನ್ನು ಬಳಸಿ ತಾತ್ಕಾಲಿಕ ಹೆರಿಗೆ ಕೋಣೆ ಸಿದ್ಧಪಡಿಸಿ, ಅನುಭವ ಹೊಂದಿದ್ದ ಮಹಿಳೆಯರ ಮಾರ್ಗದರ್ಶನದಲ್ಲಿ ಸಹಜ ಹೆರಿಗೆ ನಡೆಸಲಾಯಿತು.

ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಮೊದಲ ಅಳು ಕೇಳುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಬಳಿಕ ತಾಯಿ ಮತ್ತು ನವಜಾತ ಶಿಶುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ನಾಗರಿಕರ ಸಮಯಪ್ರಜ್ಞೆ ಮತ್ತು ಸಹಕಾರ ಹೇಗೆ ಜೀವಗಳನ್ನು ರಕ್ಷಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular