Sunday, April 26, 2026
Flats for sale
Homeದೇಶನವದೆಹಲಿ : ಆಸ್ಪತ್ರೆಗಳ ICU ಘಟಕಗಳಲ್ಲಿ ದೀರ್ಘಕಾಲ ರೋಗಿಗಳನ್ನು ಅನಗತ್ಯವಾಗಿ ಇರಿಸುವಂತಿಲ್ಲ; ಕೇಂದ್ರ ಸರ್ಕಾರ ಸಿದ್ಧಪಡಿಸಿದ...

ನವದೆಹಲಿ : ಆಸ್ಪತ್ರೆಗಳ ICU ಘಟಕಗಳಲ್ಲಿ ದೀರ್ಘಕಾಲ ರೋಗಿಗಳನ್ನು ಅನಗತ್ಯವಾಗಿ ಇರಿಸುವಂತಿಲ್ಲ; ಕೇಂದ್ರ ಸರ್ಕಾರ ಸಿದ್ಧಪಡಿಸಿದ ಏಕರೂಪದ ಮಾರ್ಗಸೂಚಿಗಳಿಗೆ ಸುಪ್ರೀಂ ಕೋರ್ಟ್ ಅನುಮೋದನೆ.

ನವದೆಹಲಿ : ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ (ICU) ರೋಗಿಗಳನ್ನು ಅನಗತ್ಯವಾಗಿ ದೀರ್ಘಕಾಲ ಇರಿಸುವುದನ್ನು ತಡೆಯಲು ಹಾಗೂ ಪಾರದರ್ಶಕತೆ ತರಲು ಸುಪ್ರೀಂ ಕೋರ್ಟ್ ಆ ಇಂಡಿಯಾ ಮಹತ್ವದ ಕ್ರಮ ಕೈಗೊಂಡಿದೆ. ಐಸಿಯು ದಾಖಲಾತಿ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಿದ್ಧಪಡಿಸಿದ ಏಕರೂಪದ ಮಾರ್ಗಸೂಚಿಗಳಿಗೆ ನ್ಯಾಯಾಲಯ ಅನುಮೋದನೆ ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಅನಗತ್ಯ ವಾಸ್ತವ್ಯಕ್ಕೆ ಕಡಿವಾಣ:
ರೋಗಿಯ ಸ್ಥಿತಿ ಸುಧಾರಿಸಿದ ನಂತರ ಅಥವಾ ಪ್ರಾಣಾಪಾಯದ ಪರಿಸ್ಥಿತಿ ಇಲ್ಲದಿದ್ದರೂ ಐಸಿಯುನಲ್ಲಿ ಇರಿಸಲು ಅವಕಾಶವಿಲ್ಲ. ರೋಗಿ ಸ್ಥಿರಗೊಂಡ ತಕ್ಷಣ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಬೇಕು ಎಂದು ಮಾರ್ಗಸೂಚಿಗಳು ತಿಳಿಸಿವೆ.

ಕುಟುಂಬದ ಒಪ್ಪಿಗೆ ಕಡ್ಡಾಯ:
ಐಸಿಯುನಲ್ಲಿ ದಾಖಲಿಸುವ ಮೊದಲು ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ಕುಟುಂಬದವರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಅವರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ. ಈ ಮಾರ್ಗಸೂಚಿಗಳನ್ನು AIIMS ವೈದ್ಯರು ಸೇರಿದಂತೆ ತಜ್ಞರ ಸಮಿತಿ ಸಿದ್ಧಪಡಿಸಿದ್ದು, ಅವು ಪ್ರಾಯೋಗಿಕ ಹಾಗೂ ಅಗತ್ಯವೆಂದು ನ್ಯಾಯಮೂರ್ತಿಗಳಾದ ಅಹಸಾನುದ್ದೀನ್ ಅಮಾನುಲ್ಲಾಹ್ ಮತ್ತು R ಮಹಾದೇವನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.ಈ ನಿಯಮಗಳನ್ನು ಜಾರಿಗೆ ತರುವ ಕುರಿತು ವಿವರವಾದ ಕ್ರಿಯಾ ಯೋಜನೆಯನ್ನು ಮೇ 18ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಗಡುವು ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular