ಮಂಗಳೂರು : ಧರ್ಮಸ್ಥಳ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನದ ಉತ್ಖನನಕ್ಕೆ ಸ್ಥಳದಲ್ಲಿ ಸಿದ್ದತೆ ನಡೆದಿದೆ. ಉತ್ಖನನಕ್ಕೆ ಬೇಕಾದ ಸಾಮಾಗ್ರಿಗಳನ್ನು ಅಧಿಕಾರಿಗಳು ತಂದಿದ್ದು ಅಧಿಕಾರಿಗಳು ಸ್ಥಳಕ್ಕೆ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದಾರೆ.
ಧರ್ಮಸ್ಥಳ ಶವ ಹೂತ ಕೇಸ್ ತನಿಖೆಗೆ ಸಂಬಂಧಿಸಿದಂತೆ ಎಸ್ಐಟಿಗೆ ಮತ್ತಷ್ಟು ಪೊಲೀಸ್ ಬಲ ಹೆಚ್ಚಾಗಿದೆ. ಮತ್ತೆ 9 ಮಂದಿ ಪೊಲೀಸರು ಎಸ್ಐಟಿಗೆ ನೇಮಕ ಮಾಡಲಾಗಿದೆ.
ಈಗಾಗಲೇ 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು ಇದೀಗ ಮತ್ತೆ 9 ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್‌ಐ ಲಾರೆನ್ಸ್, ಸೆನ್ ಪೊಲೀಸ್ ಠಾಣೆಯ ಹೆಚ್.ಸಿ ಪುನೀತ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಚ್.ಸಿ ಮನೋಹರ, ವಿಟ್ಲ ಪೊಲೀಸ್ ಠಾಣೆಯ ಪಿ.ಸಿ ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಸಿ ಸಂದೀಪ್, ಉಡುಪಿ ಸಿ.ಎಸ್.ಪಿ ಪೊಲೀಸ್ ಠಾಣೆಯ ಪಿ.ಸಿ ಲೋಕೇಶ್, ಹೊನ್ನಾವರ ಪೊಲೀಸ್ ಠಾಣೆಯ ಹೆಚ್.ಸಿ ಸತೀಶ್ ನಾಯ್ಕ, ಮಂಗಳೂರು ಎಫ್.ಎಮ್.ಎಸ್ ದಳದ ಹೆಚ್.ಸಿ ಜಯರಾಮೇಗೌಡ ಮತ್ತು ಹೆಚ್.ಸಿ ಬಾಲಕೃಷ್ಣ ಗೌಡ ನೇಮಕ ಮಾಡಲಾಗಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಎಸ್ಐಟಿಗೆ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ.


