ಆಂಧ್ರಪ್ರದೇಶ : ಬುಧವಾರ ಸಂಜೆ ಕಂದುಕೂರ್ ಪಟ್ಟಣದಲ್ಲಿ ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉದ್ದೇಶಿಸಿ ಮಾತನಾಡಿದ ರೋಡ್‌ಶೋನಲ್ಲಿ ಕಾಲ್ತುಳಿತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.
ರೋಡ್‌ಶೋನಲ್ಲಿ ಪಾಲ್ಗೊಳ್ಳಲು ಬಂದಿದ್ದ ಟಿಡಿಪಿ ಬೆಂಬಲಿಗರು ಒಳಚರಂಡಿ ಕಾಲುವೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಕೆಲ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಎನ್‌ಟಿಆರ್ ವೃತ್ತದಲ್ಲಿ ಮಾತನಾಡಿದ ನಾಯ್ಡು, ಜೀವಹಾನಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಟಿಡಿಪಿಯಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು.
“ಸಭೆಗೆ ಬಂದ ನಮ್ಮ ಟಿಡಿಪಿ ಕುಟುಂಬದ ಸದಸ್ಯರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ. ಎನ್‌ಟಿಆರ್ ಟ್ರಸ್ಟ್ ಮೂಲಕ ಅವರ ಕುಟುಂಬಗಳಲ್ಲಿನ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವುದು ಸೇರಿದಂತೆ ಅವರ ಕುಟುಂಬಗಳಿಗೆ ನಾನು ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತೇನೆ. ನಾವೂ ಬೆಂಬಲಿಸುತ್ತೇವೆ…
ನಂತರ ನಾಯ್ಡು ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡವರು ಮತ್ತು ಮೃತರ ಕುಟುಂಬಗಳನ್ನು ಭೇಟಿ ಮಾಡಿದರು. ಅವರು ಗುರುವಾರ ನಿಧನರಾದ ಪಕ್ಷದ ಸದಸ್ಯರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.