Tuesday, September 15, 2026
Homeಕ್ರೀಡೆಮಂಗಳೂರು : ಐಸ್ ಸ್ಕೇಟಿಂಗ್‌ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕೋನ್ಸೆಸ್ಸೊಗೆ ನಾಲ್ಕು ಪದಕಗಳ ಸಾಧನೆ.

ಮಂಗಳೂರು : ಐಸ್ ಸ್ಕೇಟಿಂಗ್‌ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕೋನ್ಸೆಸ್ಸೊಗೆ ನಾಲ್ಕು ಪದಕಗಳ ಸಾಧನೆ.

ಮಂಗಳೂರು : ಭಾರತೀಯ ಐಸ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಡೆಹ್ರಾಡೂನ್‌ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕೋನ್ಸೆಸ್ಸೊ ಗಮನಾರ್ಹ ಸಾಧನೆ ಮಾಡಿದ್ದಾರೆ.

ಹಿರಿಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಡ್ಯಾಶಿಯಲ್, ಮಿಕ್ಸ್ಡ್ ರಿಲೇ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದು, 500 ಮೀ., 1000 ಮೀ. ಹಾಗೂ 1500 ಮೀ. ಸ್ಪರ್ಧೆಗಳಲ್ಲಿ ಮೂರು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಸ್ತುತ ಮಂಗಳೂರಿನ ಎಸ್‌ಡಿಎಂ ಸಂಸ್ಥೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಡ್ಯಾಶಿಯಲ್, ಮಂಗಳೂರಿನ ದೇರೆಬೈಲ್ ನಿವಾಸಿಗಳಾದ ಫ್ರಾನ್ಸಿಸ್ ಮತ್ತು ಡೋರಿಸ್ ಕೋನ್ಸೆಸ್ಸೊ ಅವರ ಪುತ್ರಿಯಾಗಿದ್ದಾರೆ.

ಡ್ಯಾಶಿಯಲ್ ಅವರ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular