Wednesday, July 1, 2026
Homeವಿದೇಶಬೆಂಗಳೂರು : ಉಗಾಂಡಾದಲ್ಲಿ ಕೊಟ್ಟೂರು ಮೂಲದ ಮಹಿಳೆ ಆತ್ಮಹತ್ಯೆ; ಪಾರ್ಥಿವ ಶರೀರ ತರಲು ತರಳಬಾಳು ಶ್ರೀಗಳ...

ಬೆಂಗಳೂರು : ಉಗಾಂಡಾದಲ್ಲಿ ಕೊಟ್ಟೂರು ಮೂಲದ ಮಹಿಳೆ ಆತ್ಮಹತ್ಯೆ; ಪಾರ್ಥಿವ ಶರೀರ ತರಲು ತರಳಬಾಳು ಶ್ರೀಗಳ ನೆರವು.

ವಿಜಯನಗರ : ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿ ಗ್ರಾಮದ ಮೂಲದ ಬಿಂದು (24) ಅವರು ಉಗಾಂಡಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಬಿಂದು ಅವರು ಪತಿ ಚಂದ್ರಶೇಖರ್ ಅವರೊಂದಿಗೆ ಉಗಾಂಡಾದಲ್ಲಿ ನೆಲೆಸಿದ್ದರು. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತ ಬಿಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ತರಳಬಾಳು ಮಠದ ಶ್ರೀಗಳು ನೆರವಿನ ಹಸ್ತ ಚಾಚಿದ್ದಾರೆ. ವಿದೇಶಿ ರಾಯಭಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಶ್ರೀಗಳು ಸಹಕಾರ ನೀಡಿದ್ದಾರೆ.

ಮೃತದೇಹವು ನಾಳೆ (ಜುಲೈ 2) ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಬಳಿಕ ಸ್ವಗ್ರಾಮ ಕನ್ನನಾಯಕನ ಹಟ್ಟಿಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಘಟನೆಯ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular