Friday, July 31, 2026
Homeಕ್ರೈಂಬೆಳಗಾವಿ : 2 ಸಾವಿರ ಸಾಲದ ಹಣ ಮರು ಪಾವತಿಸದಕ್ಕೆ ಗೆಳೆಯನ ಹತ್ಯೆ,ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ…!

ಬೆಳಗಾವಿ : 2 ಸಾವಿರ ಸಾಲದ ಹಣ ಮರು ಪಾವತಿಸದಕ್ಕೆ ಗೆಳೆಯನ ಹತ್ಯೆ,ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ…!

ಮಂಗಳೂರು : ಜಸ್ಟ್ ‌2 ಸಾವಿರ ಹಣಕ್ಕಾಗಿ ಬೆಳಗಾವಿಯಲ್ಲಿ ಯುವಕನ ನೆತ್ತರು ಹರಿದಿದೆ. ಕೊಟ್ಟ ಸಾಲ ಮರುಪಾವತಿಸದಕ್ಕೆ ಸ್ನೇಹಿತನಿಗೆ ಚಟ್ಟ ಕಟ್ಟಿ ಆಸಾಮಿ ಪೊಲೀಸರಿಗೆ ಶರಣಾಗಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿ ನಡೆದಿದೆ.

ಗಿರಿಯಾಲ‌ ಗ್ರಾಮದ ಮಂಜುನಾಥ ಗೌಡರ (30) ಕೊಲೆಯಾದ ದುರ್ದೈವಿ, ಕಳೆದ ವಾರ ಸ್ನೇಹಿತ ದಯಾನಂದ ಗುಂಡ್ಲೂರನಿಂದ ಮಂಜುನಾಥ2 ಸಾವಿರ ಸಾಲ ಪಡೆದಿದ್ದನು ಒಂದು ವಾರದೊಳಗೆ ಹಣ ಮರಳಿಸುವುದಾಗಿ ಹೇಳಿದ್ದನು ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದು ಈ ವಿಚಾರವಾಗಿ ನಿನ್ನೆ ರಾತ್ರಿ ಮಂಜುನಾಥ ‌ಹಾಗೂ ದಯಾನಂದ ಮಧ್ಯೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು ದಯನಂದ ಮಂಜುನಾಥ‌ನನ್ನು ಕೊಲೆಗೈದಿದ್ದಾನೆ. ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿ‌ನ ಜಾವ ಕೊಡ್ಲಿಯಿಂದ ಹೊಡೆದು ಮಂಜುನಾಥ‌ನ ಹತ್ಯೆಯಾಗಿದೆ.

ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಗೌಡರ ಉಸಿರು ಚೆಲ್ಲಿದ್ದು ಮಂಜುನಾಥ ಗೌಡರ ಸಾವನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ದಯಾನಂದ ಪೋಲಿಸರಿಗೆ ಶರಣಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular