Friday, July 31, 2026
Homeರಾಜ್ಯಬೆಂಗಳೂರು : ಕುಟ್ಟಾದಲ್ಲಿ ಅತ್ಯಾಚಾರ ಪ್ರಕರಣದ ಬಳಿಕ ಹೋಮ್‌ಸ್ಟೇಗಳ ಮೇಲೆ ಸರ್ಕಾರ ಕಠಿಣ ನಿಯಮ ಜಾರಿ,...

ಬೆಂಗಳೂರು : ಕುಟ್ಟಾದಲ್ಲಿ ಅತ್ಯಾಚಾರ ಪ್ರಕರಣದ ಬಳಿಕ ಹೋಮ್‌ಸ್ಟೇಗಳ ಮೇಲೆ ಸರ್ಕಾರ ಕಠಿಣ ನಿಯಮ ಜಾರಿ, ಸಿಬ್ಬಂದಿ ಪರಿಶೀಲನೆ ಕಡ್ಡಾಯ.

ಬೆಂಗಳೂರು : ಕೊಡಗು ಜಿಲ್ಲೆಯ ಕುಟ್ಟಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆ ರಾಜ್ಯ ಸರ್ಕಾರ ಹೋಮ್‌ಸ್ಟೇಗಳ ಮೇಲೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿರುವ ಎಲ್ಲಾ ಹೋಮ್‌ಸ್ಟೇಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆಯನ್ನು ಸಂಬಂಧಿತ ಪೊಲೀಸ್ ಠಾಣೆಗಳ ಮೂಲಕ ಕಡ್ಡಾಯಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಎಲ್ಲಾ ನೋಂದಾಯಿತ ಹೋಮ್‌ಸ್ಟೇಗಳ ಮಾಹಿತಿಯನ್ನು ಕರ್ನಾಟಕ ಸ್ಮಾರ್ಟ್ ಇ-ಬೀಟ್ ವ್ಯವಸ್ಥೆಯಲ್ಲಿ ಅಳವಡಿಸಬೇಕು,ಬೀಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಮೂಲಕ ಹಾಜರಿಯನ್ನು ದಾಖಲಿಸಬೇಕು,ಸಿಬ್ಬಂದಿ ವಿವರಗಳನ್ನು ಭೌತಿಕ ಅಥವಾ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬೇಕು,ನೋಂದಣಿ ಪ್ರಮಾಣಪತ್ರ/ಲೈಸೆನ್ಸ್‌ ಅನ್ನು ರಿಸೆಪ್ಶನ್‌ನಲ್ಲಿ ಪ್ರದರ್ಶಿಸಬೇಕು ಎಂದು ತಿಳಿಸಿದ್ದಾರೆ.

ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಕಡ್ಡಾಯ ತರಬೇತಿ ನೀಡಬೇಕು,ಲೈಂಗಿಕ ಸಂವೇದನೆ ಲೈಂಗಿಕ ಕಿರುಕುಳ ಕಾಯ್ದೆ,ಪೋಕ್ಸೋ ಕಾಯ್ದೆ ಬಗ್ಗೆ ಕಡ್ಡಾಯ ತರಬೇತಿ ನೀಡಬೇಕಾಗಿದೆ. ರಾಜ್ಯ ಪೊಲೀಸರ ಆಪ್ ಡೌನ್‌ಲೋಡ್ ಮಾಡಲು ಅನುಕೂಲವಾಗುವಂತೆ ಹೋಮ್‌ಸ್ಟೇ ರಿಸೆಪ್ಶನ್‌ನಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಬೇಕು. ಈ ನಿಯಮಗಳನ್ನು ಪಾಲಿಸದ ಹೋಮ್‌ಸ್ಟೇಗಳನ್ನು ತಕ್ಷಣವೇ ಅಧಿಕೃತ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ನೋಂದಾಯಿತ ಹೋಮ್‌ಸ್ಟೇಗಳ ಪಟ್ಟಿಯನ್ನು ಸರ್ಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ. ಪ್ರವಾಸಿಗರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹೋಮ್‌ಸ್ಟೇಗಳ ಮೇಲಿನ ನಿಯಂತ್ರಣವನ್ನು ಕಠಿಣಗೊಳಿಸಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular