Sunday, May 3, 2026
Flats for sale
Homeದೇಶನವದೆಹಲಿ : ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಎಸಿ ಸ್ಫೋಟ : 9 ಮಂದಿ ಸಜೀವದಹನ.

ನವದೆಹಲಿ : ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಎಸಿ ಸ್ಫೋಟ : 9 ಮಂದಿ ಸಜೀವದಹನ.

ನವದೆಹಲಿ : ರಾಜಧಾನಿ ನವದೆಹಲಿಯ ವಿವೇಕ ವಿಹಾರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 9 ಮಂದಿ ಸಜೀವದಹನಗೊಂಡ ದುರ್ಘಟನೆ ನಡೆದಿದೆ.

ವಿವೇಕ ವಿಹಾರದಲ್ಲಿರುವ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಮುಂಜಾನೆ ಸುಮಾರು 3:47ರ ಸುಮಾರಿಗೆ ಎಸಿ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಕಟ್ಟಡದೊಳಗೆ ವ್ಯಾಪಿಸಿತು. ಬೆಂಕಿಯ ತೀವ್ರತೆಗೆ ಒಳಗಾದ ನಿವಾಸಿಗಳು ಪಾರಾಗಲು ಸಾಧ್ಯವಾಗದೆ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ನಿಖರ ಕಾರಣ ಹಾಗೂ ಹಾನಿಯ ಅಂದಾಜು ಇನ್ನಷ್ಟೇ ತಿಳಿದುಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular