Saturday, May 2, 2026
Flats for sale
Homeವಾಣಿಜ್ಯನವದೆಹಲಿ : ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆ Paytm ಗೆ ಭಾರೀ ಆಘಾತ : ಪೇಮೆಂಟ್ಸ್...

ನವದೆಹಲಿ : ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆ Paytm ಗೆ ಭಾರೀ ಆಘಾತ : ಪೇಮೆಂಟ್ಸ್ ಬ್ಯಾಂಕ್’ ಪರವಾನಗಿ ರದ್ದುಗೊಳಿಸಿದ RBI.

ನವದೆಹಲಿ : ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆಯಾದ Paytm ಗೆ ಭಾರೀ ಆಘಾತ ಎದುರಾಗಿದೆ. Reserve Bank of India (ಆರ್‌ಬಿಐ) Paytm Payments Bank Limited (PPBL) ನ ಬ್ಯಾಂಕಿಂಗ್ ಪರವಾನಗಿಯನ್ನು ತಕ್ಷಣದಿಂದ ರದ್ದುಗೊಳಿಸಿದೆ.

ಆರ್‌ಬಿಐ ಆದೇಶದಂತೆ, ಏಪ್ರಿಲ್ 24ರ ವ್ಯವಹಾರದ ಅಂತ್ಯದ ವೇಳೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಎಲ್ಲಾ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 22(4) ಅಡಿಯಲ್ಲಿ ನೀಡಲಾಗಿದ್ದ ಪರವಾನಗಿಯನ್ನು ಹಿಂಪಡೆಯಲಾಗಿದೆ.

ಬ್ಯಾಂಕ್‌ನ ವ್ಯವಹಾರ ನಡೆಸುವ ವಿಧಾನ ಠೇವಣಿದಾರರ ಹಿತಾಸಕ್ತಿಗೆ ಹಾನಿಕಾರಕವಾಗಿದೆ ಎಂಬ ಗಂಭೀರ ಕಾರಣವನ್ನು ಉಲ್ಲೇಖಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. “ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕಿನ ಕಾರ್ಯವೈಖರಿ ಸುರಕ್ಷಿತವಾಗಿಲ್ಲದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಪ್ರಕಟಣೆ ಹೇಳಿದೆ.

ಇದರಿಂದ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಪೇಟಿಎಂನ ಮಾತೃ ಸಂಸ್ಥೆಯಾದ One97 Communications ಷೇರುಗಳು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಯಲ್ಲಿ ಕುಸಿತ ಕಂಡಿವೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಷೇರುಗಳು ಶೇ. 0.5ರಷ್ಟು ಇಳಿಕೆ ಕಂಡು ಪ್ರತಿ ಷೇರಿಗೆ ₹1,153 ಕ್ಕೆ ಸ್ಥಿರಗೊಂಡಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular