Sunday, November 22, 2026
Homeದೇಶವಾಷಿಂಗ್ಟನ್ : ಭಾರತದ ಏಳಿಗೆ ತಡೆಯಲು ಪಾಕ್‌ಗೆ ಚೀನ ಕುಮ್ಮಕ್ಕು: ಅಮೆರಿಕ ಆಯೋಗದ ವರದಿಯಲ್ಲಿ ಸ್ಫೋಟಕ...

ವಾಷಿಂಗ್ಟನ್ : ಭಾರತದ ಏಳಿಗೆ ತಡೆಯಲು ಪಾಕ್‌ಗೆ ಚೀನ ಕುಮ್ಮಕ್ಕು: ಅಮೆರಿಕ ಆಯೋಗದ ವರದಿಯಲ್ಲಿ ಸ್ಫೋಟಕ ಮಾಹಿತಿ..!

ವಾಷಿಂಗ್ಟನ್ : ಭಾರತದ ಆರ್ಥಿಕ ಮತ್ತು ಸೇನಾ ಶಕ್ತಿಯ ಬೆಳವಣಿಗೆಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಚೀನ ಪಾಕಿಸ್ತಾನಕ್ಕೆ ನಿರಂತರ ಬೆಂಬಲ ನೀಡುತ್ತಿದೆ ಎಂಬ ಸ್ಫೋಟಕ ಮಾಹಿತಿ ಅಮೆರಿಕ ಸಂಸತ್‌ಗೆ ಸಲ್ಲಿಕೆಯಾಗಿರುವ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿದೆ.

ಅಮೆರಿಕ-ಚೀನ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ ತನ್ನ ವಾರ್ಷಿಕ ವರದಿಯಲ್ಲಿ ಈ ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಆಪರೇಷನ್ ಸಿಂದೂರ ಸಂಘರ್ಷದ ಸಂದರ್ಭದಲ್ಲಿಯೂ ಚೀನ ಪಾಕಿಸ್ತಾನಕ್ಕೆ ನೆರವು ನೀಡಿತ್ತು ಎಂದು ವರದಿ ತಿಳಿಸಿದೆ.

ಏಷ್ಯಾದಲ್ಲಿ ಚೀನದ ಪ್ರಾಬಲ್ಯಕ್ಕೆ ಸವಾಲೊಡ್ಡುವ ಸಾಮರ್ಥ್ಯ ಭಾರತಕ್ಕಿದೆ ಎಂಬುದನ್ನು ಅರಿತಿರುವ ಜಿನ್‌ಪಿಂಗ್ ಆಡಳಿತ, ಭಾರತದ ಪ್ರಭಾವ ಮತ್ತು ಬೆಳವಣಿಗೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ ಎಂದು ಆಯೋಗ ವಿಶ್ಲೇಷಿಸಿದೆ.

ಭಾರತದ ಪ್ರಾದೇಶಿಕ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ಚೀನ ರೂಪಿಸಿರುವ ಕಾರ್ಯತಂತ್ರದ ಭಾಗವಾಗಿಯೇ ಪಾಕಿಸ್ತಾನಕ್ಕೆ ನೀಡುತ್ತಿರುವ ನಿರಂತರ ನೆರವನ್ನು ವರದಿ ಬಿಂಬಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular