Thursday, November 12, 2026
Homeದೇಶನವದೆಹಲಿ : ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು…!

ನವದೆಹಲಿ : ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು…!

ನವದೆಹಲಿ : ಅಜ್ಜನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಜನ್ಮಸಿದ್ಧವಾಗಿ ಯಾವುದೇ ಹಕ್ಕು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಲೆತಲಾಂತರಗಳಿಂದ ಬಂದಿರುವ ನಿಜವಾದ ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಮಾತ್ರ ಮೊಮ್ಮಕ್ಕಳು ಜನ್ಮಸಿದ್ಧ ಹಕ್ಕು ಪ್ರತಿಪಾದಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಮಹತ್ವ
ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಅಜ್ಜನ ಮರಣದ ಬಳಿಕ ವಾರಸುದಾರರಿಗೆ ಹಂಚಿಕೆಯಾದ ಆಸ್ತಿಯಲ್ಲಿ ತಂದೆಗೆ ಬಂದ ಪಾಲು ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಅಂತಹ ಆಸ್ತಿಯಲ್ಲಿ ಮಗ ಅಥವಾ ಮೊಮ್ಮಗ ಜನ್ಮಸಿದ್ಧ ಹಕ್ಕು ಕೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಚೆನ್ನೈನ ಆಸ್ತಿ ವಿವಾದದಲ್ಲಿ ಮಹತ್ವದ ತೀರ್ಪು
ಚೆನ್ನೈನ 1,811 ಚದರ ಅಡಿ ನಿವೇಶನಕ್ಕೆ ಸಂಬಂಧಿಸಿದ ವಿವಾದದ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ಎನ್. ರಾಮಕೃಷ್ಣನ್ ಅವರಿಗೆ ಸೇರಿದ ಆಸ್ತಿ ಅವರ ಮರಣದ ಬಳಿಕ ಮಗ ಮತ್ತು ಮಗಳ ನಡುವೆ ಹಂಚಿಕೆಯಾಗಿತ್ತು. 1994ರಲ್ಲಿ ರಾಜಿ ತೀರ್ಪಿನ ಮೂಲಕ ತಂದೆಗೆ ನಿರ್ದಿಷ್ಟ ಪಾಲು ಲಭಿಸಿತ್ತು.

ನಂತರ ತಂದೆ ತಮ್ಮ ಪಾಲಿಗೆ ಬಂದ ಆಸ್ತಿಯನ್ನು ಮಾರಾಟ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದ ಮಗ, ತಾತನ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿದ್ದು, ತನಗೂ ಅದರಲ್ಲಿ ಜನ್ಮಸಿದ್ಧವಾಗಿ ಅರ್ಧ ಪಾಲು ಬರಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದ.

ಮಗನ ವಾದ ತಿರಸ್ಕರಿಸಿದ ಸುಪ್ರೀಂ
ಮಗನ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸೆಕ್ಷನ್ 8ರ ಅಡಿಯಲ್ಲಿ ವಾರಸುದಾರರಿಗೆ ವರ್ಗಾವಣೆಯಾಗುವ ಆಸ್ತಿ ಅವರ ವೈಯಕ್ತಿಕ ಆಸ್ತಿಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ತಂದೆಗೆ ಬಂದ ಪಾಲು ಅವರ ಪ್ರತ್ಯೇಕ ಆಸ್ತಿಯಾಗಿದ್ದು, ಅದನ್ನು ಮಾರಾಟ ಮಾಡಲು ಮಗನ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಮೂಲಕ ಕೆಳ ನ್ಯಾಯಾಲಯಗಳ ತೀರ್ಪನ್ನು ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular