Friday, August 21, 2026
Homeರಾಜ್ಯಮೈಸೂರು : ಆಂಬುಲೆನ್ಸ್‌ನಲ್ಲೇ ಹೆರಿಗೆ : ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.

ಮೈಸೂರು : ಆಂಬುಲೆನ್ಸ್‌ನಲ್ಲೇ ಹೆರಿಗೆ : ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.

ಮೈಸೂರು : ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಹೆರಿಗೆ ನೋವು ತೀವ್ರಗೊಂಡ ಪರಿಣಾಮ ಮಹಿಳೆಯೊಬ್ಬರು 108 ಆಂಬುಲೆನ್ಸ್‌ನಲ್ಲೇ ಗಂಡು ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಿದ ಘಟನೆ ಹೆಚ್.ಡಿ. ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಬಳಿ ನಡೆದಿದೆ.

ಹೆಬ್ಬಲಗುಪ್ಪೆ ಗ್ರಾಮದ ಆಶಾ ಅವರಿಗೆ ಗುರುವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೆಳಗ್ಗೆ 8:15ಕ್ಕೆ 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಬಳಿಕ ಆಶಾ ಅವರನ್ನು ಹೆಚ್.ಡಿ. ಕೋಟೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಹೆರಿಗೆ ನೋವು ತೀವ್ರಗೊಂಡಿದ್ದು, ಪರಿಸ್ಥಿತಿಯನ್ನು ಅರಿತ ಆಂಬುಲೆನ್ಸ್‌ನ ಇಎಂಟಿ ಮಹೇಶ್ ಹಾಗೂ ಚಾಲಕ ಪ್ರಸನ್ನ ಅವರು ಸಮಯಪ್ರಜ್ಞೆ ಮೆರೆದು ಅಗತ್ಯ ನೆರವು ಮತ್ತು ಸುಶ್ರೂಷೆ ನೀಡಿದ್ದಾರೆ.

ಪರಿಣಾಮ ಆಂಬುಲೆನ್ಸ್‌ನಲ್ಲೇ ಆಶಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ತಾಯಿ ಹಾಗೂ ಮಗುವಿನ ಸುರಕ್ಷಿತ ಹೆರಿಗೆಗೆ ನೆರವಾದ 108 ಆಂಬುಲೆನ್ಸ್ ಸಿಬ್ಬಂದಿ ಮಹೇಶ್ ಮತ್ತು ಪ್ರಸನ್ನ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular