Tuesday, October 6, 2026
Homeವಿದೇಶಟೆಲ್ಅವಿವಾ : ಜುಲೈಯಲ್ಲೇ ಟೆಲ್ ಅವಿವ್ ಮೇಲೆ ದಾಳಿಗೆ ಸಂಚು ? ಆಪ್ತ ಸ್ನೇಹಿತನಿದ್ದ ಕಾರಣ...

ಟೆಲ್ಅವಿವಾ : ಜುಲೈಯಲ್ಲೇ ಟೆಲ್ ಅವಿವ್ ಮೇಲೆ ದಾಳಿಗೆ ಸಂಚು ? ಆಪ್ತ ಸ್ನೇಹಿತನಿದ್ದ ಕಾರಣ ಯೋಜನೆ ಕೈಬಿಟ್ಟಿದ್ದ ಪೈಲಟ್…!

ಟೆಲ್ ಅವಿವ್ : ಫೈ ದುಬೈ ವಿಮಾನ FZ1073ರಲ್ಲಿ ನಡೆದ ಗಂಭೀರ ಘಟನೆಯ ತನಿಖೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಜುಲೈ ತಿಂಗಳಲ್ಲೇ ಟೆಲ್ ಅವಿವ್ ಮೇಲೆ ವಿಮಾನ ಬಳಸಿ ದಾಳಿ ನಡೆಸಲು ಯೋಜಿಸಿದ್ದ, ಆದರೆ ವಿಮಾನದಲ್ಲಿದ್ದ ಆಪ್ತ ಸ್ನೇಹಿತನೊಬ್ಬನ ಕಾರಣಕ್ಕೆ ಆ ಯೋಜನೆಯನ್ನು ಮುಂದೂಡಿದ್ದ ಎನ್ನುವ ಮಾಹಿತಿ ತನಿಖಾಧಿಕಾರಿಗಳಿಂದ ಹೊರಬಿದ್ದಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ FZ1073 ವಿಮಾನದಲ್ಲಿ ಹಮ್ಮಾಮಿ ಕ್ಯಾಪ್ಟನ್ ಮೇಲೆ ದಾಳಿ ನಡೆಸಿ ವಿಮಾನದ ನಿಯಂತ್ರಣ ಪಡೆಯಲು ಯತ್ನಿಸಿದ್ದಾನೆ ಎಂಬ ಆರೋಪವಿದೆ. ವಿಮಾನ ತೀವ್ರವಾಗಿ ಕೆಳಗಿಳಿದ ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ಗೆ ಸುರಕ್ಷಿತವಾಗಿ ತಿರುಗಿಸಲಾಯಿತು.

ಫೈ ದುಬೈ ಸೇರುವ ಮೊದಲೇ ಸಂಚು?.

ವರದಿಗಳ ಪ್ರಕಾರ, ಹಮ್ಮಾಮಿ ಫೈ ದುಬೈಗೆ ಸೇರುವುದಕ್ಕೂ ಮುನ್ನವೇ ಟೆಲ್ ಅವಿವ್‌ಗೆ ಹಾರಾಟ ನಡೆಸುವ ವಿಮಾನಯಾನ ಸಂಸ್ಥೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್ನಲಾಗಿದೆ. ನಂತರ ಟೆಲ್ ಅವಿವ್‌ಗೆ ನೇರ ಸೇವೆ ಹೊಂದಿದ್ದ ಫೈ ದುಬೈನಲ್ಲಿ ಪೈಲಟ್ ಆಗಿ ಸೇರಿಕೊಂಡಿದ್ದ ಎಂಬ ಆರೋಪವೂ ತನಿಖೆಯ ಭಾಗವಾಗಿದೆ.

ಜುಲೈನಲ್ಲೇ ಮೊದಲ ಪ್ರಯತ್ನ?.

ತನಿಖಾಧಿಕಾರಿಗಳ ಪ್ರಕಾರ, ಜುಲೈನಲ್ಲೇ ದಾಳಿ ನಡೆಸಲು ಯೋಜಿಸಿದ್ದರೂ ಆ ದಿನ ವಿಮಾನದಲ್ಲಿದ್ದ ಪರಿಚಿತ ವ್ಯಕ್ತಿಯೊಬ್ಬರ ಉಪಸ್ಥಿತಿಯಿಂದ ಯೋಜನೆಯನ್ನು ಮುಂದೂಡಿದ್ದ ಸಾಧ್ಯತೆ ಇದೆ. ಈ ಮಾಹಿತಿ ಇನ್ನೂ ತನಿಖೆಯಲ್ಲಿದ್ದು, ದಾಳಿಯ ಹಿಂದಿನ ಉದ್ದೇಶ ಮತ್ತು ಆತ ಏಕಾಂಗಿಯಾಗಿ ಕಾರ್ಯನಿರ್ವಹಿಸಿದ್ದನೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಸೆಪ್ಟೆಂಬರ್ 30ರ ಘಟನೆಯನ್ನು ಆರಂಭದಲ್ಲಿ ಅಪಹರಣದ ಭೀತಿ ಎಂದು ಪರಿಗಣಿಸಲಾಗಿತ್ತು. ನಂತರ ಕ್ಯಾಪ್ಟನ್ ಮೇಲೆ ಸಹ ಪೈಲಟ್ ನಡೆಸಿದ ದಾಳಿ ಮತ್ತು ವಿಮಾನವನ್ನು ನಿಯಂತ್ರಣಕ್ಕೆ ಪಡೆಯುವ ಪ್ರಯತ್ನದ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆಯ ಸಂಪೂರ್ಣ ಹಿನ್ನೆಲೆ ಇನ್ನೂ ತನಿಖೆಯಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular