Tuesday, October 6, 2026
Homeಜಿಲ್ಲೆಚಿಕ್ಕಮಗಳೂರು : ಕಾಫಿನಾಡ ಕಾಡಿನಲ್ಲಿ ಕಾಡುಕೋಣ ಬೇಟೆ, ಕೇರಳಕ್ಕೆ ಮಾಂಸ ಸಾಗಾಟ, ಕೆಡಿಪಿ ಸಭೆಯಲ್ಲಿ ಭೋಜೇಗೌಡ...

ಚಿಕ್ಕಮಗಳೂರು : ಕಾಫಿನಾಡ ಕಾಡಿನಲ್ಲಿ ಕಾಡುಕೋಣ ಬೇಟೆ, ಕೇರಳಕ್ಕೆ ಮಾಂಸ ಸಾಗಾಟ, ಕೆಡಿಪಿ ಸಭೆಯಲ್ಲಿ ಭೋಜೇಗೌಡ ಗಂಭೀರ ಆರೋಪ..!

ಚಿಕ್ಕಮಗಳೂರು : ಕಾಫಿನಾಡಿನ ಕಾಡುಗಳಲ್ಲಿ ಕಾಡುಕೋಣಗಳನ್ನು ಅಕ್ರಮವಾಗಿ ಬೇಟೆಯಾಡಿ, ಅವುಗಳ ಮಾಂಸವನ್ನು ಕೇರಳಕ್ಕೆ ಸಾಗಿಸುವ ಜಾಲ ಸಕ್ರಿಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಎಂ.ಎಲ್‌.ಸಿ. ಭೋಜೇಗೌಡ ಈ ಕುರಿತು ಆರೋಪಗಳನ್ನು ಪ್ರಸ್ತಾಪಿಸಿದ್ದಾರೆ.

ಕಾಡುಕೋಣ ಮಾಂಸಕ್ಕೆ ಭಾರೀ ಬೆಲೆ?.

ಕೇರಳದಲ್ಲಿ ಕಾಡುಕೋಣದ ಮಾಂಸಕ್ಕೆ ಕೆ.ಜಿ.ಗೆ ಸುಮಾರು ₹5,000 ಬೆಲೆ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಹೊರರಾಜ್ಯದ ಶಿಕಾರಿ ಗ್ಯಾಂಗ್‌ಗಳು ಚಿಕ್ಕಮಗಳೂರು ಕಾಡುಗಳಲ್ಲಿ ಬೀಡುಬಿಟ್ಟು ಬೇಟೆ ನಡೆಸುತ್ತಿದ್ದಾರೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂದಿದೆ..

ಅರಣ್ಯ ಸಿಬ್ಬಂದಿ ಶಾಮೀಲು ಶಂಕೆ

ಅಕ್ರಮ ಬೇಟೆ ಜಾಲದಲ್ಲಿ ಅರಣ್ಯ ಇಲಾಖೆಯ ಕೆಳಹಂತದ ಕೆಲವು ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆಯ ಬಗ್ಗೆಯೂ ಆರೋಪ ವ್ಯಕ್ತವಾಗಿದೆ. ಲಕ್ಷಾಂತರ ರೂಪಾಯಿ ಹಣ ಪಡೆದು ಅಕ್ರಮ ಚಟುವಟಿಕೆಗಳಿಗೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದ್ದು, ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ..

ಬೇಟೆ ಜಾಲಕ್ಕೆ ಕಡಿವಾಣಕ್ಕೆ ಆಗ್ರಹ..

ಚಿಕ್ಕಮಗಳೂರು ಕಾಡುಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಾಡುಕೋಣಗಳ ಅಕ್ರಮ ಬೇಟೆ ಹಾಗೂ ಮಾಂಸ ಸಾಗಾಟದ ಜಾಲವನ್ನು ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಅಕ್ರಮ ಬೇಟೆ ಜಾಲವನ್ನು ಬೇರುಸಹಿತ ಕಿತ್ತೊಗೆಯಬೇಕು ಎಂದು ಕೆಡಿಪಿ ಸಭೆಯಲ್ಲಿ ಒತ್ತಾಯಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular