ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ನಡುವಿನ ಬಣಗಳ ಗುದ್ದಾಟ ಮುಂದುವರಿದಿದೆ.
ಕಳೆದ ನವೆಂಬರ್ 23ರೊಳಗೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಿಯಂತ್ರಿಸಲು ತಮ್ಮ ಹಕ್ಕುಗಳನ್ನು ಬೆಂಬಲಿಸುವ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗವ ನವೆಂಬರ್ 12 ರಂದು ಎರಡೂ ಕಡೆಯವರನ್ನು ಕೇಳಿತ್ತು.
ಈ ಸಂಬಂಧ ಮೊದಲ ವಿಚಾರಣೆಯನ್ನು ಡಿಸೆಂಬರ್ 12ರಂದು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ತಿಳಿಸಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.