ಮಂಗಳೂರು ; ಮಂಗಳೂರಿನ ಆಸ್ಪತ್ರೆಯೊಂದರ ಅಧೀನದಲ್ಲಿರುವ ಶಕ್ತಿನಗರದ ಖಾಸಗಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ಸುಮಾರು 137 ವಿದ್ಯಾರ್ಥಿಗಳು ಫೆ.6ರ ಸೋಮವಾರ ರಾತ್ರಿ ಹಾಸ್ಟೆಲ್ ಮೆಸ್‌ನಲ್ಲಿ ರಾತ್ರಿ ಊಟ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ. ಆಹಾರ ವಿಷ, ಹೊಟ್ಟೆನೋವು, ಲೂಸ್ ಮೋಷನ್ ಮತ್ತು ವಾಂತಿ ಎಂದು ವಿದ್ಯಾರ್ಥಿಗಳು ದೂರಿದ ನಂತರ ಅವರನ್ನು ಕಾಲೇಜು ಬಸ್‌ಗಳಲ್ಲಿ ಸ್ಥಳಾಂತರಿಸಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಕೆಲ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.




ಕಾಲೇಜು ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ ಮುಖ್ಯ ಕಾರಣ ಎಂಬುದು ವಿಧ್ಯಾರ್ಥಿಗಳ ದೂರು.
ಮೂಲಗಳ ಪ್ರಕಾರ ಎಜೆ ಆಸ್ಪತ್ರೆಯಲ್ಲಿ 52, ಫ್ರಾ ಮುಲ್ಲರ್ಸ್ ಆಸ್ಪತ್ರೆಯಲ್ಲಿ 42, ಜ್ಯೋತಿಯ ಕೆಎಂಸಿ ಆಸ್ಪತ್ರೆಯಲ್ಲಿ 18, ಯುನಿಟಿ ಆಸ್ಪತ್ರೆಯಲ್ಲಿ 14, ಸಿಟಿ ಆಸ್ಪತ್ರೆಯಲ್ಲಿ 8 ಮತ್ತು ಮಂಗಳಾ ಆಸ್ಪತ್ರೆಯಲ್ಲಿ 3 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ವಿದ್ಯಾರ್ಥಿಗಳು ದಾಖಲಾಗಿರುವ ಆಸ್ಪತ್ರೆ ಗಳಿಗೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್.