ಮಂಗಳೂರು ; ಒಂದಲ್ಲ…ಎರಡಲ್ಲ….ಒಟ್ಟು ಒಂಬತ್ತು ದೈವಗಳಿಂದ ಏಕಕಾಲದಲ್ಲಿ ನಡೆದ ನರ್ತನ ಸೇವೆ ಅದು. ಅದೂ ಕೂಡಾ ಅತೀ ಹೆಚ್ಚು ಆರಾಧನೆಗೊಳ್ಳುವ ಗುಳಿಗ ದೈವಕ್ಕೆ ಈ ರೀತಿಯ ನರ್ತನ ಸೇವೆ ಸದ್ಯ ಕರವಾಳಿಯಲ್ಲಿ ಎಲ್ಲೂ ಕೂಡಾ ನಡೆಯೋದಿಲ್ಲ. ತುಳುನಾಡ ದೈವಾರಾಧನೆ ಇತಿಹಾಸದಲ್ಲೇ ನವಗುಳಿಗ ದೈವಕ್ಕೆ ನಡೆದ ಆ ನರ್ತನ ಸೇವೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಹೀಗೇ ಮೈ ನವಿರೇಳುವಂತೆ ನರ್ತಿಸ್ತಾ ಇರೋ ಈ ಒಂಬತ್ತು ದೈವಗಳ ಹೆಸರು ಗುಳಿಗ. ಕರಾವಳಿ ಭಾಗದ ಜನರಿಂದ ಹೆಚ್ಚಾಗಿ ಆರಾಧಸಲ್ಪಡುವ ಈ ಗುಳಿಗ ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ಹೀಗೇ ನರ್ತನ ಸೇವೆ ಮಾಡೋದು ಇದೆ. ಆದ್ರೆ ಇಲ್ಲಿ ಹೀಗೇ ಒಂಬತ್ತು ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗುತ್ತಿದ್ದು ಇದು ಕರಾವಳಿಯಲ್ಲಿ ನಡೆದಿರೋ ಏಕೈಕ ನವ ಗುಳಿಗ ಸೇವೆ. ಅಷ್ಟಕ್ಕೂ ಇದು ನಡೆದಿರೋದು ಎಲ್ಲಿ ಅಂದ್ರೆ ಬೆಳ್ತಂಗಡಿ ತಾಲೂಕಿನ ವೇಣೂರಿನ ಬರ್ಕಾಜೆ ಎಂಬ ಪುಟ್ಟ ಗ್ರಾಮದಲ್ಲಿ. ಇಲ್ಲಿರೋ ನವದುರ್ಗೆಯರ ದೇವಸ್ಥಾನದಲ್ಲಿ ಈ ನವಗುಳಿಗ ದೈವಗಳ ನರ್ತನ ಸೇವೆ ನಡೆಸಲಾಗಿತ್ತು. ನವ ದುರ್ಗೆಯರ ಕ್ಷೇತ್ರಪಾಲಕರಾಗಿ ಒಂಬತ್ತು ಗುಳಿಗ ದೈವಗಳು ಇಲ್ಲಿ ನೆಲೆಯಾಗಿರೋ ಕಾರಣ ಇಲ್ಲಿ ಈ ನವ ಗುಳಿಗ ನರ್ತನ ಸೇವೆ ನಡೆಸಲಾಗಿದೆ.
ಈ ದೈವಸ್ಥಾನದ ಮದ್ಯಸ್ಥರು ಮಾತನಾಡಿ ಸಾಮಾನ್ಯವಾಗಿ ದುರ್ಗಾದೇವಿ ನೆಲೆಸಿರುವ ಕ್ಷೇತ್ರಗಳಲ್ಲಿ ಕ್ಷೇತ್ರಪಾಲಕನಾಗಿ ಗುಳಿಗ ಇದ್ದೇ ಇರ್ತಾನೆ. ಇಂತಹ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಗುಳಿಗನಿಗೆ ಈ ರೀತಿಯಾಗಿ ನರ್ತನ ಸೇವೆಯನ್ನು ನೀಡಲಾಗುತ್ತದೆ. ಇನ್ನು ತುಳುನಾಡಿನ ಹೆಚ್ಚಿನ ಜನರ ಮನೆಯಲ್ಲೂ ಈ ಗುಳಿಗನ ಆರಾಧನೆ ನಡೆಯುತ್ತದೆ. ಆದ್ರೆ ಕೆಲ ವರ್ಷಗಳ ಹಿಂದೆ ಬರ್ಕಾಜೆ ಎಂಬ ಗ್ರಾಮದಲ್ಲಿ ಪುನರ್ ನಿರ್ಮಾಣವಾದ ನವದುರ್ಗಾ ದೇವಸ್ಥಾನದಲ್ಲಿ ಕ್ಷೇತ್ರಪಾಲಕರಾಗಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ. ಇದು ತುಳುನಾಡ ಇತಿಹಾಸದಲ್ಲೇ ಮೊದಲಾಗಿದ್ದು, ಇದನ್ನು ವೀಕ್ಷಿಸೋದಿಕ್ಕೆ ದೂರದ ಊರುಗಳಿಂದಲೂ ಜನ ಇಲ್ಲಿಗೆ ಬಂದಿದ್ದು ವಿಶೇಷ. ಈ ಕ್ಷೇತ್ರದಲ್ಲಿ ಪ್ರಾರ್ಥಿಸಿ ಹೋದವರಿಗೆ ಎದುರಾಗುವ ಎಲ್ಲಾ ಸಂಕಷ್ಟಗಳೂ ನಿವಾರಣೆ ಆಗೊತ್ತೆ ಅನ್ನೋ ನಂಬಿಕೆ ಕೂಡಾ ಇದೆ. ಹೀಗಾಗಿ ಮುಂಬೈ,ಬೆಂಗಳೂರು, ಚೆನೈ ಮೊದಲಾದೆಡೆಯಿಂದಲೂ ಜನರು ಇಲ್ಲಿಗೆ ಆಗಮಿಸಿ ಈ ನವ ಗುಳಿಗ ನರ್ತನ ಸೇವೆಯನ್ನನ ಕಣ್ತುಂಬಿಕೊಂಡಿದ್ದಾರೆ.
ಸುಪರ್ ಹಿಟ್ ಚಿತ್ರ ಕಾಂತರ ಸಿನೆಮಾ ಬಂದ ಬಳಿಕ ತುಳುನಾಡಿನ ದೈವಾರಧಾನೆ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಕಾಂತರದ ಕ್ಷೇತ್ರಪಾಲ ಗುಳಿಗ ಹಾಗೂ ಪಂಜುರ್ಲಿ ದೈವಗಳ ನರ್ತನ ನೋಡಲು ಹೊರ ರಾಜ್ಯದಿಂದಲೂ ಜನರು ಬರಲು ಆರಂಭಿಸಿದ್ದಾರೆ. ಹೀಗಿರುವಾಗ ಈ ನವ ಗುಳಿಗಳ ನರ್ತನ ಸೇವೆ ತುಳನಾಡಿನ ಜನರಿಗೆ ಅಚ್ಚರಿ ಮೂಡಿಸಿರುವುದಂತು ಸುಳ್ಳಲ್ಲ. ನಂಬಿಕೆಯ ಥರ್ಮದ ಮೂಲ ಎಂಬುವುದು ಇಲ್ಲಿ ಸಾಬಿತಾಗಿದೆ.