ಮಂಗಳೂರು : ಹುಂಡೈ ಕಂಪೆನಿಗೆ ಸೇರಿದ ಐಷರಾಮಿ ಸಾಂತ ಫೆ ಕಾರು ನಗರದ ಹಂಪನಕಟ್ಟೆ ಬಳಿ ಬೆಂಕಿಗಾಹುತಿಯಾಗಿದೆ. ಕಾರು ಚಲಾಹಿಸುವ ವೇಳೆ ಹೋಗೆ ಕಾಣಿಸಿಕೊಂಡಿದ್ದು ಕೆಲಹೊತ್ತಿನಲ್ಲೇ ಬೆಂಕಿ ಹರಡಿಕೊಂಡಿದೆ
ಕಾರಿನಲ್ಲಿದ್ದ ಮಹಿಳೆ ಪ್ರಾಣಅಪಾಯದಿಂದ ಪಾರಗಿದ್ದು,ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಮಾಹಿತಿ ದೊರೆತಿದೆ.ಜಿಲ್ಲೆಯಲ್ಲಿ ಇತ್ತೀಚ್ಚಿಗೆ ಜಿಲ್ಲೆಯ ಹಲವೆಡೆ ಹಲವು ಕಾರುಗಳು ಬೆಂಕಿಗೆ ಆಹುತಿಯಾಗಿದ್ದು ನಿಖರ ಕರಣ ಇನ್ನು ತಿಳಿದುಬಂದಿಲ್ಲ.
ಶಾರ್ಟ್ ಸರ್ಕ್ಯೂಟ್ ನಿಂದ ಇಡೀ ಕಾರು ಬೆಂಕಿಗಾಹುತಿಯಾಗಿರುವ ಸಂಶಯ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ.ಸ್ಥಳೀಯ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.