ಮಂಗಳೂರು : ಮಂಗಳೂರು ನಗರದ ಹಂಪನಕಟ್ಟ ಜಂಕ್ಷನ್ ನಗರದ ಪ್ರಮುಖ ಜಂಕ್ಷನ್ ಆಗಿದ್ದು, ಈ ಜಂಕ್ಷನ್ ಅತೀ ವಾಹನ ದಟ್ಟಣಿ ಹಾಗೂ ಹೆಚ್ಚು ಪಾದಚಾರಿಗಳು ಸಂಚರಿಸುವ ಕಾರಣ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ನಗರ ಪೊಲೀಸ್ ಇಲಾಖೆ ವಾಹನ ಸಂಚಾರಕ್ಕೆ ಹೊಸ ರಸ್ತೆಗಳನ್ನು ಗುರುತಿಸಿದೆ. ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಯಾವ ರಸ್ತೆಗಳಲ್ಲಿ ವಾಹನ ಸಂಚಾರ ?
ಸದ್ಯ ಹಂಒನಕಟ್ಟ ಜಂಕ್ಷನ್ ನಲ್ಲಿ ಸಿಗ್ನಲ್ ಇದ್ದು ಇಲ್ಲಿನ ನಾಲ್ಕೂ ರಸ್ತೆಗಳಲ್ಲಿ ವಾಹನಗಳು ಸಂಚಾರಿ ನಿಯಮದಂತೆ ಸಾಗಲು ಅವಕಾಶ ಇತ್ತು. ಆದರೆ ಇನ್ನು ಮುಂದೆ ಹಂಪನಕಟ್ಟ ಜಂಕ್ಷನ್‌ನ ಮಧ್ಯದಲ್ಲಿ ಬ್ಯಾರಿಕೇಡ್ ಅಳವಡಿಸಿ ಫಳ್ನಿರ್ ರಸ್ತೆ ಮತ್ತು ನವಭಾರತ್ ಸರ್ಕಲ್ ರಸ್ತೆಗೆ ಹೋಗುವ ವಾಹನಗಳಿಗೆ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಪ್ರಾಯೋಗಿಕವಾಗಿ ಈ ಬದಲಾವಣೆ ಮಾಡಲಾಗಿದ್ದು, ಯಶಸ್ವಿಯಾದಲ್ಲಿ ಮುಂದೆ ಇದು ಶಾಶ್ವತವಾಗಿ ಮುಂದುವರೆಯಲಿದೆ.
- ಕ್ಲಾಕ್ ಟವರ್ ಕಡೆಯಿಂದ ಫಳ್ನಿರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ಎಲ್ಲಾ ವಾಹನಗಳು ಇನ್ನು ಮುಂದೆ ಹಂಪನಕಟ್ಟ ಸರ್ಕಲ್ ನಲ್ಲಿ ಬಲಕ್ಕೆ ತಿರುಗಲು ಅವಕಾಶ ಇಲ್ಲ. ಈ ರಸ್ತೆ ಪ್ರವೇಶಿಸುವ ವಾಹನಗಳು ನೇರವಾಗಿ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ, ಜೋಸ್ ಅಲುಕಾಸ್ ಎದುರು U ಟರ್ನ್ ಪಡೆದು ವಾಪಾಸು ಹಂಪನಕಟ್ಟ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫಳ್ನಿರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಸಂಚರಿಸಬಹುದಾಗಿದೆ.
2, ಫಳ್ನಿರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಯಿಂದ ನವಭಾರತ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಕ್ಲಾಕ್ ಟವರ್ ಕಡೆಗೆ ಚಲಿಸಿ ಕ್ಲಾಕ್ ಟವರ್, ಜಂಕ್ಷನ್‌ನಲ್ಲಿ U ಟರ್ನ್ ತೆಗೆದು ಹಂಪನಕಟ್ಟ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ನವಭಾರತ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
- ನವಭಾರತ್ ಸರ್ಕಲ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜೆ ಮಂಗೇಶ್ವರ ರಾವ್ ರಸ್ತೆಯ (ಪಿ.ಎಂ.ರಾವ್) ಮೂಲಕ ಚಲಿಸಿ, ಗಣಪತಿ ಹೈಸ್ಕೂಲ್ ರಸ್ತೆ (ಹೆಚ್‌ಎಸ್) ಮೂಲಕ ಕೃಷ್ಣಭವನಕಟ್ಟೆ ಜಂಕ್ಷನ್(ಕೆ.ಬಿ.ಕಟ್ಟಿ) ತಲುಪಿ, ಅಲ್ಲಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ.
ಹಾಗೆಯೇ ನವಭಾರತ್ ಸರ್ಕಲ್ ಕಡೆಯಿಂದ ಫಳ್ನಿರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಜಂಕ್ಷನ್‌ನಲ್ಲಿ ಎಡ ತಿರುವು (ಫ್ರೀ ಲೆಫ್ಟ್) ಪಡೆದು ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಸಿ ಜೋಸ್ ಅಲುಕಾಸ್ ಎದುರು U ಟರ್ನ್ ಪಡೆದು ಹಂಪನಕಟ್ಟ ಜಂಕ್ಷನ್ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫಳ್ನಿರ್ (ಮದರ್ ಥೆರೇಸಾ ರಸ್ತೆ) ಕಡೆಗೆ ಹಾಗೂ ನೇರವಾಗಿ ಕ್ಲಾಕ್‌ಟವ ಕಡೆಗೆ ಸಂಚರಿಸಬಹುದಾಗಿದೆ.
ಹಂಪನಕಟ್ಟ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷಿತಾ ಸಂಚಾರಕ್ಕೆ ಪಾದಚಾರಿಗಳ ಮಾರ್ಗ (Zebra Cross)ಅನ್ನು ಗುರುತಿಸಿದ್ದು ಪಾದಚಾರಿಗಳು ಕಡ್ಡಾಯವಾಗಿ ಪಾದಚಾರಿಗಳ ಮಾರ್ಗಗಳನ್ನು ಉಪಯೋಗಿಸಲು ಸೂಚಿಸಲಾಗಿದೆ.
ಇಷ್ಟೇ ಅಲ್ಲದೆ ಈ ರಸ್ತೆಯಲ್ಲಿ ಬರುವ ಎಲ್ಲಾ ಬಸ್ ಗಳಿಗೂ ನಿಗಧಿತ ಕಡೆಯಲ್ಲಿ ಪ್ರಯಾಣಿಕರನ್ನು ಹತ್ತಿಸಲು ಅವಕಾಶ ನೀಡಲಾಗಿದೆ. ಪ್ರಯಾಣಿಕರೂ ಕೂಡಾ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಹಾಗೂ ನಗರ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳಿಗೆ ಕೆ.ಜಿ ಕಟ್ಟೆ ಬಸ್ಸು ನಿಲ್ದಾಣ ಹಾಗೂ ಜೋಸ್ ಅಲುಕಾಸ್ ಎದುರಿನ ಬಸ್ ನಿಲ್ದಾಣದಲ್ಲಿ ಮಾತ್ರ ಬಸ್ ಹಿಡಿಯಲು ನಿಲ್ಲಲು ಅವಕಾಶ ಇರುತ್ತದೆ. ಈ ಹೊಸ ಸಂಚಾರಿ ನಿಯಮ ನಾಳೆಯಿಂದಲೇ ಆರಂಭವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.