Wednesday, May 13, 2026
Flats for sale
Homeಜಿಲ್ಲೆಮಂಗಳೂರು: ಕೊರಗಜ್ಜ ದೈವ ಭಕ್ತ ಪಿ ಖಾಸಿಂ ಸಾಹಿಬ್ ನಿಧನ.

ಮಂಗಳೂರು: ಕೊರಗಜ್ಜ ದೈವ ಭಕ್ತ ಪಿ ಖಾಸಿಂ ಸಾಹಿಬ್ ನಿಧನ.

ಮಂಗಳೂರು, ಮಾ.5: ಎರಡು ದಶಕಗಳಿಂದ ಕೊರಗಜ್ಜ (ದೈವ) ದೇಗುಲ ನಿರ್ಮಿಸಿ ನಿತ್ಯವೂ ವಿಶೇಷ ಪೂಜೆ ಸೇರಿದಂತೆ ನಾನಾ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದ ಕೇರಳದ ಪಿ.ಖಾಸಿಂ ಸಾಹಿಬ್ (67) ಶನಿವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 5.

ಕೊಳ್ನಾಡಿನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪಿ ಖಾಸಿಂ ಸಾಹೇಬರು ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರೂ ಕೊರಗಜ್ಜನನ್ನು ಪೂಜಿಸಿ ಅವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯ ಗಟ್ಟಿ ಸಂದೇಶ ಸಾರಿದರು. ಅವರು ವಿವಿಧ ಧರ್ಮಗಳ ನಡುವೆ ಏಕತೆಯ ಸಂಕೇತವಾಗಿದ್ದರು.

ಪಿ ಖಾಸಿಂ ಸಾಹಿಬ್ ಕೇರಳದ ಪಾಲಕ್ಕಾಡ್ ಜಿಲ್ಲೆಯ ಚಿತ್ತಲಂಚೇರಿ ಗ್ರಾಮದ ನಿವಾಸಿ. ಸುಮಾರು 37 ವರ್ಷಗಳ ಹಿಂದೆ ಉದ್ಯೋಗ ಅರಸಿ ಕುಟುಂಬ ಸಮೇತ ಜಿಲ್ಲೆಗೆ ಬಂದು ಮಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ಮೂಲ್ಕಿ ತಾಲೂಕಿನ ಕವತ್ತಾರು ಎಂಬಲ್ಲಿ ನೆಲೆಸಿದ್ದರು.

ಅವರ ಕಷ್ಟದ ಸಮಯದಲ್ಲಿ ಕೊರಗಜ್ಜನನ್ನು ಪೂಜಿಸಲು ದೈವ ಪಾತ್ರಿಯೊಬ್ಬರು ಸಲಹೆ ನೀಡಿದರು. ಕೊರಗಜ್ಜನನ್ನು, ಕೊರತಿ ಮತ್ತು ದುರ್ಗಾಪರಮೇಶ್ವರಿ ಸಮೇತ ಚಿಕ್ಕದಾದ ಜಮೀನಿನಲ್ಲಿ ಪೂಜಿಸಿದರು. ಇಂದಿನವರೆಗೂ ಹಲವಾರು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular