ಇದೊಂದು ಲವ್ ಜಿಹಾದ್ ಎಂದ ಹಿಂದೂಗಳು
ಕೊಚ್ಚಿ(ಕೇರಳ): ದೆಹಲಿಯಲ್ಲಿ ಅಫ್ತಾಬ್ ಪೂನಾವಾಲ ಎಂಬಾತ ಶ್ರದ್ಧಾಳನ್ನು ಕೊಂದು ದೇಹವನ್ನು ೩೫ ತುಂಡುಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿಟ್ಟ ಪ್ರಕರಣ ಹಸಿರಾಗಿರುವಾಗಲೇ ಇದೀಗಾ ದೇವರ ನಾಡು ಕೇರಳದ ಕೊಚ್ಚಿಯಲ್ಲಿ ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯ ಶಿರಚ್ಛೇದಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂಗಳು ಆರೋಪಿಸಿದ್ದಾರೆ.
ಮೂಲತಃ ಬಾಂಗ್ಲಾದದವಳಾಗಿದ್ದು, ಕೊಚ್ಚಿಯಲ್ಲಿ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡೊಕೊಂಡಿದ್ದ ಸಂಧ್ಯಾ ಎಂಬಾಕೆ ಶಿರಚ್ಛೇದ ಯತ್ನಕ್ಕೀಡಾದ ಯುವತಿಯಾಗಿದ್ದಾಳೆ. ಮೂಲತಃ ಉತ್ತರಖಾಂಡದ ನಿವಾಸಿ ಕೊಚ್ಚಿಯಲ್ಲಿ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದ ಫಾರೂಕ್ ಎಂಬಾತ ಯುವತಿಯ ತಲೆ ಕತ್ತರಿಸಿ ಕೊಲ್ಲಲು ಯತ್ನಿಸಿದ ಆರೋಪಿ. ಫಾರೂಕ್ ಡಿಸೆಂಬರ್ ೩ ರಂದು ಸಂಧ್ಯಾ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ ಆಕೆಯ ಶಿರಚ್ಛೇದ ಮಾಡುವ ಪ್ರಯತ್ನ ಮಾಡಿದ್ದ.

ಸಂಧ್ಯಾ ಒಂದು ‘ಬ್ಯೂಟಿ ಪಾರ್ಲರ್’ನಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ನಡೆದಾಗ ಯುವತಿಯು ಕಲುರ ಪ್ರದೇಶದಿಂದ ಅಜಾದ್ ಮಾರ್ಗದಲ್ಲಿ ಒಬ್ಬ ಪರಿಚಿತ ವ್ಯಕ್ತಿಯ ಜೊತೆಗೆ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಫಾರೂಖ್ ಸಂಧ್ಯಾ ಮೇಲೆ ಚಾಕುವಿನಿಂದ ಏಕಾಏಕಿ ದಾಳಿ ಮಾಡಿ ಶಿರಚ್ಛೇದ ಮಾಡಲು ಯತ್ನಿಸುತ್ತಿದ್ದ. ಆದರೆ ಘಟನಾ ಸ್ಥಳದಲ್ಲಿ ಇದ್ದ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಿದ ಕಾರಣ ಫಾರೂಖನ ಉದ್ದೇಶ ಫಲಿಸಲಿಲ್ಲ. ಆದರೆ ಅಷ್ಟೊತ್ತಿಗಾಗಲೇ ಸಂಧ್ಯಾಳ ಕುತ್ತಿಗೆಗೆ ಗಾಯವಾಗಿದ್ದು, ಸ್ಥಳದಲ್ಲಿ ರಕ್ತ ಹರಿಯುತ್ತಿರುವುದು ಕಂಡುಬಂದಿದೆ.
ಯುವತಿ ಮೂಲತಃ ಬಂಗಾಲದವಳಾಗಿದ್ದು ಕೆಲಸದ ಹುಡುಕಾಟದಲ್ಲಿ ಕೊಚ್ಚಿಗೆ ಬಂದಿದ್ದಳು. ಕೇರಳದಲ್ಲಿ ಫಾರೂಖ್‌ನ ಪರಿಚಯವಾಗಿರವಹುದು ಎಂಬ ಸಂಶಯ ವ್ಯಕ್ತವಾಗಿದೆ. ಸದ್ಯ ಆರೋಪಿ ಸಂಧ್ಯಾಳನ್ನು ಕೊಲೆಮಾಡುವ ಉದ್ಧೇಶದಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಪೊಲೀಸರು ಕೃತ್ಯದ ಬಗ್ಗೆ ದೂರು ದಾಖಲಿಸಿ ಫಾರೂಖ್‌ನನ್ನು ಹುಡುಕುತ್ತಿದ್ದಾರೆ. ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿಯ ನಂತರ ಫಾರೂಖ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ. ಆದರೆ ದಾಳಿಗಾಗಿ ಉಪಯೋಗಿಸಿದ ಚಾಕು ಘಟನಾಸ್ಥಳದಲ್ಲಿಯೆ ಬಿಟ್ಟಿದ್ದಾನೆ. ಸ್ಥಳೀಯರು ಗಾಯಗೊಂಡಿರುವ ಸಂಧ್ಯಾಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಫಾರೂಖ್ ಮತ್ತು ಸಂಧ್ಯಾ ಇವರಲ್ಲಿ ಹಿಂದಿನಿಂದ ಸಂಬಂಧ ಇದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದು ಲವ್ ಜಿಹಾದ್ ಎನ್ನುವ ಆರೋಪಿ ಕೇಳಿಬಂದಿದೆ. ಸಂಧ್ಯಾ ಫಾರೂಖ್ ಸಹವಾಸ ಬಿಟ್ಟ ಕಾರಣ ಈಕೆಯ ಕತೆಮುಗಿಸಲು ಫಾರೂಖ್ ಪ್ಲಾನ್ ಮಾಡಿದ್ದಾನೆ ಎನ್ನಲಾಗಿದೆ.