Thursday, May 14, 2026
Flats for sale
Homeಕ್ರೈಂಮಂಗಳೂರು : ಗಾಂಜಾ ಸಾಗಾಟ ಆರೋಪಿ ಬಲೆಗೆ : ₹1.56 ಲಕ್ಷ ಮೌಲ್ಯದ 3 ಕೆಜಿ...

ಮಂಗಳೂರು : ಗಾಂಜಾ ಸಾಗಾಟ ಆರೋಪಿ ಬಲೆಗೆ : ₹1.56 ಲಕ್ಷ ಮೌಲ್ಯದ 3 ಕೆಜಿ ಗಾಂಜಾ ವಶಕ್ಕೆ.

ಮಂಗಳೂರು : ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳೂರು ನಗರದ ಕಾವೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇರ್ಷಾದ್ @ ಇರ್ಷಾ (26) ಎಂದು ಗುರುತಿಸಲಾಗಿದ್ದು, ಉಳ್ಳಾಲದ ಮುಕ್ಕಚೇರಿ ಹಿಲರಿಯ ನಗರ ನಿವಾಸಿಯಾಗಿದ್ದಾನೆ.

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಯು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಕಾರ್ಯಾಚರಣೆಯ ವೇಳೆ ಆರೋಪಿಯಿಂದ 3 ಕೆಜಿ 138 ಗ್ರಾಂ ಗಾಂಜಾ,ಮೊಬೈಲ್ ಫೋನ್, ಸ್ಕೂಟರ್, ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು ₹1.56 ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿಅಪರಾಧ ಸಂಖ್ಯೆ 74/2026 ಅಡಿಯಲ್ಲಿ NDPS ಕಾಯ್ದೆಯ ಕಲಂ 8(c), 20(b)(ii)(B) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯನ್ನು ಪಣಂಬೂರು ಎಸಿಪಿ ತಂಡ ಹಾಗೂ ಕಾವೂರು ಠಾಣೆ ಪೊಲೀಸರು ನಡೆಸಿದ್ದಾರೆ. ಆರೋಪಿಯ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದ್ದು ಉಳ್ಳಾಲ ಪೊಲೀಸ್ ಠಾಣೆ (2019) – IPC 307 ಹಾಗೂ Arms Act ಪ್ರಕರಣಮಂಗಳೂರು ಸಿಸಿಬಿ ಪ್ರಕರಣ (2024) – NDPS Act ಅಡಿಯಲ್ಲಿ ಗಾಂಜಾ ಪ್ರಕರಣ ದಾಖಲಾಗಿದೆ.ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular