Monday, August 17, 2026
Homeವಿದೇಶವಾಷಿಂಗ್ಟನ್ : ಇರಾನ್-ಅಮೆರಿಕ ಯುದ್ಧವು ಶೀಘ್ರದಲ್ಲೇ ಅಂತ್ಯ : ಟ್ರಂಪ್ ಸುಳಿವು.

ವಾಷಿಂಗ್ಟನ್ : ಇರಾನ್-ಅಮೆರಿಕ ಯುದ್ಧವು ಶೀಘ್ರದಲ್ಲೇ ಅಂತ್ಯ : ಟ್ರಂಪ್ ಸುಳಿವು.

ವಾಷಿಂಗ್ಟನ್ : ಇಡೀ ಜಗತ್ತನ್ನೇ ಆತಂಕಕ್ಕೇ ತಳ್ಳಿದ್ದ ಇರಾನ್-ಅಮೆರಿಕ ಯುದ್ಧವು ಶೀಘ್ರದಲ್ಲೇ ಅಂತ್ಯಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದು, ಇರಾನ್ ವಿರುದ್ಧದ ಯುದ್ಧವು ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಟಿವಿ ಸಂದರ್ಶನವೊAದರಲ್ಲಿ ಮಾತನಾಡಿರುವ ಅವರು, ಶತ್ರು ರಾಷ್ಟç ಇರಾನ್ ಈಗ ಮಾತುಕತೆಗೆ ಒಲವು ತೋರುತ್ತಿದೆ ಎಂದರು.
ಹೀಗಾಗಿ ಅವರು ಯುದ್ಧ ಮುಕ್ತಾಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದರೂ ಇರಾನ್‌ಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಯುದ್ಧವು ಅಂತ್ಯದ ಹಂತದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನಾವಿನ್ನೂ ಪೂರ್ಣವಾಗಿ ಮುಗಿಸಿಲ್ಲ. ಏನಾಗುತ್ತದೆಯೋ ಕಾದು ನೋಡೋಣ. ಇರಾನ್ ಈಗ ಒಪ್ಪಂದ ಒಪ್ಪಿಕೊಳ್ಳಲಾಗದೇ ಹತಾಶವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ಇನ್ನು ಅಮೆರಿಕ ಇರಾನ್‌ನಿಂದ ಕೂಡಲೇ ಹಿಂದೆ ಸರಿದರೆ ಆ ದೇಶ ಮರುನಿರ್ಮಾಣ ಮಾಡಲು ಕನಿಷ್ಠ 20 ವರ್ಷಗಳೇ ಬೇಕಾಗಬಹುದು ಎಂದು ಪುನರುಚ್ಚರಿಸಿದರು.

ಇನ್ನು ಉಭಯ ದೇಶಗಳ ನಡುವಿನ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಲು ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅಮೆರಿಕ ವಿಧಿಸಿರುವ ದಿಗ್ಬಂಧನದಿಂದಾಗಿ ಇರಾನ್ ಆರ್ಥಿಕತೆ ತತ್ತರಿಸಿ ಹೋಗಿದೆ. ಈ ಒತ್ತಡವೇ ಇರಾನ್‌ಅನ್ನು ಮಾತುಕತೆ ಟೇಬಲ್‌ಗೆ ತರುವಂತೆ ಮಾಡಿದೆ.

ಅಮೆರಿಕ ಇರಾನ್‌ನ ಬಂದರುಗಳ ಮೇಲೆ ವಿಧಿಸಿರುವ ದಿಗ್ಬಂಧನ ಮುಂದುವರಿಸಿದರೆ, ಇದಕ್ಕೆ ಪ್ರತೀಕಾರವಾಗಿ ಪರ್ಷಿಯನ್ ಕೊಲ್ಲಿ, ಓಮನ್ ಕೊಲ್ಲಿ ಮತ್ತು ಕೆಂಪು ಸಮುದ್ರದ ಮೂಲಕ ನಡೆಯುವ ಯಾವುದೇ ಆಮದು ಮತ್ತು ರಫ್ತುಗಳನ್ನು ಅನುಮತಿಸುವುದಿಲ್ಲ ಎಂದು ಇರಾನ್ ಗುಡುಗಿದೆ. ಈ ಕುರಿತು ಹೇಳಿಕೆ ನೀಡಿರುವ ಇರಾನ್ ಸೇನಾ ವಕ್ತಾರ, ನಮ್ಮ ವಾಣಿಜ್ಯ ಹಡಗುಗಳಿಗೆ ಅಸುರಕ್ಷತೆ ಉಂಟು ಮಾಡಿದರೆ, ನಾವು ಈ ಪ್ರದೇಶದಲ್ಲಿ ಯಾವುದೇ ಹಡಗು ಸಂಚಾರಕ್ಕೆ ಅವಕಾಶ ನೀಡಿಲ್ಲ ಎಂದು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular